ಸಾಂಸ್ಕೃತಿಕ

ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಾಧನೆ

ಕುಶಾಲನಗರ, ಸೆ 05:ದಿನಾಂಕ: 03-09-2025 ಬುಧವಾರ ಶ್ರೀ ರಾಮ ಯುವಕ ಸಂಘ ಜನತಾ ಕಾಲೋನಿ ಇವರ ವತಿಯಿಂದ ಶ್ರೀ ಗೌರಿ ಗಣೇಶೋತ್ಸವದ ಪ್ರಯಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಂದ ಸುಮಾರು 12ಕ್ಕೂ ಅಧಿಕ ನೃತ್ಯ ತಂಡಗಳು ಆಗಮಿಸಿದ್ದು ಇದರಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಅತ್ಯುತ್ತಮ ನೃತ್ಯ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ವಿದ್ಯಾರ್ಥಿಗಳ ನೃತ್ಯ ಪ್ರಕಾರವನ್ನು ವೀಕ್ಷಿಸಿದ ತೀರ್ಪುಗಾರರು ಇವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ ಮತ್ತು ನೆರೆದಿದ್ದ ಜನರ ಮೈ ರೋಮಾಂಚನ ಗೊಳಿಸುವ ನೃತ್ಯ ಪ್ರಕಾರವನ್ನು ಮಾಡಿದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಶ್ರೀ ರಾಮ ಯುವಕ ಸಂಘದ ಆಯೋಜಕರು, ತೀರ್ಪುಗಾರರು ಹಾಗೂ ಗಣ್ಯರು ನೃತ್ಯ ಪಟುಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ವಿತರಿಸಿ ಅಭಿನಂದಿಸಿದರು. ಹಾಗೆಯೇ ವಿಜೇತರಾದ ವಿದ್ಯಾರ್ಥಿಗಳಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಪೋಷಕರು ಮತ್ತು ನೆರೆದಿದ್ದ ಜನರು ಪ್ರೋತ್ಸಾಹಿಸಿ ಅಭಿನಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!