ಆರೋಗ್ಯ

ಶಿರಂಗಾಲಕ್ಕೆ ಆರೋಗ್ಯ ಅಧಿಕಾರಿಗಳ ಭೇಟಿ: ನಿಯಮ ಉಲ್ಲಂಘನೆ ಪ್ರಕರಣಕ್ಕೆ ದಂಡ

ಕುಶಾಲನಗರ, ಸೆ. 05: ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ತಂಬಾಕು ತನಿಖಾ ತಂಡ ಮತ್ತು ಜಿಲ್ಲಾ ತಂಬಾಕು ತನಿಖಾ ತಂಡವು ಶಿರಂಗಾಲಕ್ಕೆ ಗ್ರಾಮದಲ್ಲಿರುವ ವಿವಿಧ ಅಂಗಡಿ ,ಹೋಟೆಲ್, ಬೇಕರಿ ,ಮತ್ತು ಬಾರ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ, ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.
ನಿಯಮ ಉಲ್ಲಂಘನೆ ಮಾಡಿದ 10 ಪ್ರಕರಣಗಳನ್ನು ಗುರುತಿಸಿ 1,260.ರೂ ದಂಡವನ್ನು ವಿಧಿಸಲಾಯಿತು. ಸುತ್ತಮುತ್ತಲಿನ ಹಾಗೂ ಒಳಾಂಗಣದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು .
ಅಯೋಡಿನ್ ಯುಕ್ತ ಉಪ್ಪಿನ ಸರಿಯಾದ ಬಳಕೆ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿನವರು ಆರೋಗ್ಯ ಶಿಕ್ಷಣದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಈ ತಂಡದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಂಜಯ್ ಕುಮಾರ್ ತಂಬಾಕು ತನಿಕ ತಂಡದ DPC ಪುನೀತ, ಮತ್ತುDSW ಮಂಜುನಾಥ್ ,ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!