ಸುದ್ದಿಗೋಷ್ಠಿ

ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: 1.26 ಕೋಟಿ ನಿವ್ವಳ ಲಾಭ

ಸೆ.7 ರಂದು 2024-25ನೇ ಸಾಲಿನ ಮಹಾಸಭೆ

ಕುಶಾಲನಗರ, ಸೆ 04: ಕುಶಾಲನಗರ ೧೦೦ ವರ್ಷಗಳನ್ನು ಪೂರೈಸಿ ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ಇದೀಗ ೧೦೪ ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಶಾಲನಗರದ ನಂ. ೧೨೨ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸತತವಾಗಿ ೮ ವರ್ಷಗಳಿಂದ ಕೋಟಿಗೂ ಮೀರಿ ಲಾಭಗಳಿಸುತ್ತಿರುವುದು‌ ಹೆಮ್ಮೆಯ ಸಂಗತಿ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದರು. ಸಂಘದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಕಳೆದ ಸಾಲಿನಲ್ಲಿ ೩೬೦೪ ಸದಸ್ಯರಿಂದ ರೂ. ೩೫೮.೩೯ ಲಕ್ಷಗಳ ಪಾಲುಹಣ ಸಂಗ್ರಹಿಸಿದ್ದು, ವರದಿ ಸಾಲಿನಲ್ಲಿ ೩೬೫೬ ಸದಸ್ಯರಿಂದ ರೂ.೪೦೦.೬೭ ಲಕ್ಷಗಳ ಪಾಲುಹಣ ಸಂಗ್ರಹ ಮಾಡಿದ್ದು ರೂ ೪೨.೨೮ ಲಕ್ಷಗಳ ಹೆಚ್ಚುವರಿ ಪಾಲು ಹಣ ಸಂಗ್ರಹವಾಗಿರುತ್ತದೆ. ಸಂಘದ ದುಡಿಯುವ ಬಂಡವಾಳ ಕಳೆದ ಸಾಲಿನಲ್ಲಿ ರೂ ೬೯೫೬.೪೩ ಲಕ್ಷÀ ಇದ್ದು ವರದಿ ಸಾಲಿನಲ್ಲಿ ದುಡಿಯುವ ಬಂಡವಾಳವನ್ನು ರೂ ೭೮೫೩.೦೨ ಲಕ್ಷಗಳಷ್ಟು ಕ್ರೋಢೀಕರಿಸಿ ರೂ ೮೯೬.೫೯ ಲಕ್ಷಗಳ ಹೆಚ್ಚಿಗೆ ಸಂಗ್ರಹ ಮಾಡಿರುತ್ತೇವೆ.

ಸಂಘವು ಕಳೆದ ಸಾಲಿನಲ್ಲಿ ರೂ ೫೪೬೨.೮೫ ಲಕ್ಷಗಳು ಇದ್ದಂತಹ ಠೇವಣಿ ವರದಿ ಸಾಲಿನಲ್ಲಿ ವಿವಿಧ ಠೇವಣಿಗಳ ರೂಪದಲ್ಲಿ ರೂ. ೫೭೬೩.೨೬ ಲಕ್ಷಗಳನ್ನು ಠೇವಣಿ ಹೊಂದಿದ್ದು, ಕಳೆದ ಸಾಲಿಗಿಂತ ಅಧಿಕ ರೂ ೩೦೦.೪೧ ಲಕ್ಷಗಳ ಠೇವಣಿ ಸಂಗ್ರಹಿಸಿದ್ದು, ಇದು ಸಂಘ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿರುವುದು. ಸಂಘದ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲೆ ಇಟ್ಟಿರುವ ಅಭಿಮಾನವೇ ಇದಕ್ಕೆ ಸಾಕ್ಷಿಯಾಗಿರುತ್ತದೆ.
ವರದಿ ಸಾಲಿನಲ್ಲಿ ಸದಸ್ಯರಿಗೆ ಕೆ.ಸಿ.ಸಿ ಸಾಲವನ್ನು ೧೦೫.೦೬ ಲಕ್ಷಗಳನ್ನು ಪಾವತಿಸಿದ್ದು, ಇನ್ನೂ ಕೆಲವು ಸದಸ್ಯರಿಗೆ ಸಾಲ ವಿತರಿಸಲು ಕ್ರಮ ತೆಗೆದುಕೊಂಡಿರುತ್ತೇವೆ. ಅಲ್ಲದೆ ಬೇರೆ ವಿವಿಧ ಸಾಲಗಳನ್ನು ಕಳೆದ ಸಾಲಿನಲ್ಲಿ ರೂ. ೪೨೬೬.೭೪ ಲಕ್ಷಗಳನ್ನು ವಿತರಿಸಿದ್ದು, ವರದಿ ಸಾಲಿನಲ್ಲಿ ವಿವಿಧ ಸಾಲಗಳ ರೂಪದಲ್ಲಿ ರೂ. ೫೦೦೦.೭೮ ಲಕ್ಷಗಳನ್ನು ವಿತರಿಸಿದು,್ದ ರೂ. ೭೩೪.೦೪ ಲಕ್ಷಗಳ ಹೆಚ್ಚಿಗೆ ಸಾಲ ವಿತರಿಸಿರುತ್ತೇವೆ. ಸಂಘದ ಸ್ವಂತ ಬಂಡವಾಳದಿAದ ರೂ. ೪೦ ಲಕ್ಷಗಳನ್ನು ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆೆ.
ಕಳೆದ ಸಾಲಿನಲ್ಲಿ ಸುಸ್ತಿ ಸಾಲದ ಪ್ರಮಾಣವು ರೂ.೧೭೭.೭೦ ಲಕ್ಷಗಳಷ್ಟಿದ್ದು, ವರದಿ ಸಾಲಿನಲ್ಲಿ ರೂ.೨೦೬.೮೮ ಲಕ್ಷ ಸುಸ್ತಿ ಸಾಲ ಇರುತ್ತದೆ. ಕ್ಷೇಮನಿಧಿಯಲ್ಲಿ ಈ ಸಾಲಿನಲ್ಲಿ ರೂ.೪೩೯.೨೩ ಲಕ್ಷಗಳಿದ್ದು, ಹಾಗೂ ೨೦೨೪-೨೦೨೫ ನೇ ಸಾಲಿನ ಲಾಭ ವಿಲೇವಾರಿಯಲ್ಲಿ ರೂ ೩೧.೬೪ ಲಕ್ಷ ಸೇರಿ ಒಟ್ಟು ರೂ ೪೯೦.೮೭ ಲಕ್ಷಗಳು ಕ್ರೋಡಿಕೃತವಾಗಲಿದ್ದು, ಕ್ಷೇಮನಿಧಿ ಮೊಬಲಗನ್ನು ಪೂರ್ತಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾಗುವುದು ಮತ್ತು ಕಟ್ಟಡ ನಿಧಿ ರೂ ೩೮೮.೨೦ ಲಕ್ಷಗಳಿದ್ದು ೨೦೨೪-೨೦೨೫ ನೇ ಸಾಲಿನ ಲಾಭ ವಿಲೇವಾರಿಯಲ್ಲಿ ರೂ.೪೭.೯೩ ಲಕ್ಷ ಸೇರಿ ಕಟ್ಟಡ ನಿಧಿಯಲ್ಲಿ ಒಟ್ಟು ರೂ.೪೩೬.೧೩ ಲಕ್ಷಗಳಿದ್ದು ಈ ಮೊಬಲಗು ಸಂಘವು ಉದ್ದೇಶಿಸಿರುವ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಸಹಕಾರಿಯಾಗಿರುತ್ತದೆ. ಸಂಘದಲ್ಲಿ ವಿವಿದ ರೀತಿಯ ಇತರೆ ನಿಧಿಗಳಲ್ಲಿ ರೂ ೧೦೯.೭೯ ಲಕ್ಷಗಳು ಕ್ರೋಡಿಕೃತವಾಗಿರುತ್ತದೆ. ಇದು ಸಂಘದ ಸುಭದ್ರತೆಯನ್ನು ಸಾಬೀತುಪಡಿಸುತ್ತದೆ.
ವರದಿ ಸಾಲಿನಲ್ಲಿ ರೂ. ೨೫೯.೩೦ ಕೋಟಿ ವಾರ್ಷಿಕ ವಹಿವಾಟು ನಡೆಸಿರುತ್ತೇವೆ. ವರದಿ ಸಾಲಿನಲ್ಲಿ ರೂ. ೧.೨೬ ಕೋಟಿ ನಿವ್ವಳ ಲಾಭಗಳಿಸಿರುತ್ತೇವೆ. ಸಂಘವು ಕಳೆದ ೩೦ ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರಿಗೆ ಕಳೆದ ೧೩ ವರ್ಷಗಳಿಂದ ಶೇ.೧೬ ರಿಂದ ಶೇ.೨೫ ಡಿವಿಡೆಂಡ್ ನೀಡುತ್ತಿದ್ದು, ಸಂಘವು ಸದಸ್ಯರ ಅನುಕೂಲಕೋಸ್ಕರ ತ್ಯಾಗರಾಜ ರಸ್ತೆಯಲ್ಲಿರುವ ೮.೬೦ ಸೆಂಟ್ಸ್ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಸುಲಲಿತವಾಗಿ ಸದಸ್ಯರ ಸೇವೆಗೆ ಅನುಕೂಲವಾಗುವಂತೆ ವ್ಯವಹಾರವನ್ನು ನಡೆಸುತ್ತಿದ್ದೇವೆ. ಸಂಘದ `ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ ೨೫ ರೀತಿಯ ವಿವಿಧÀ ಸಾಲಗಳನ್ನು ಅತೀ ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರತಿ ಸದಸ್ಯನ ಕೊಡುಗೆ ಕೂಡ ಇರುವುದು.
ಈ ಸಾಲಿನಲ್ಲಿ ಸದಸ್ಯರಿಗೆ ಶೇ. ೧೦ ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ. ಸದಸ್ಯರು ಸಹಕರಿಸಬೇಕೆಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಕೋರಿಕೊಂಡಿರುತ್ತೇವೆ.
ಹಿAದಿನ ಸಾಲುಗಳಲ್ಲಿ ಸಾಲಗಾರ ಸದಸ್ಯರಿಗೋಸ್ಕರ ಹೊಸದಾಗಿ ಸಾಲಗಾರ ಸದಸ್ಯರ ಮರಣೋತ್ತರ ಪರಿಹಾರ ನಿಧಿಯ ಯೋಜನೆಯನ್ನು ಸಂಘದಲ್ಲಿ ಪ್ರಾರಂಭಿಸಿದ್ದು ಈ ಯೋಜನೆಗೆ ಸದಸ್ಯರು ಉತ್ತಮ ಪ್ರತಿಕ್ರಿಯೆಯನ್ನು ಹೊಂದಿದ್ದು ಕೇವಲ ೪ ವರ್ಷಗಳಲ್ಲಿ ಸದಸ್ಯರ ಠೇವಣಿ ಮತ್ತು ಸದಸ್ಯರು ತೊಡಗಿಸಿರುವ ಠೇವಣಿಯನ್ನು ಸಂಘದಲ್ಲೆ ಅತೀ ಹೆಚ್ಚಿನ ಬಡ್ಡಿದರದಲ್ಲಿ ತೊಡಗಿಸಿಕೊಂಡಿದ್ದು ವರದಿ ಸಾಲಿಗೆ ಈ ಮೊಬಲಗು ರೂ ೭೬.೫೦ ಲಕ್ಷಗಳಾಗಿದ್ದು, ಮರಣ ಹೊಂದಿದ ಸದಸ್ಯರ ಸಾಲವನ್ನು ಅವರ ಕುಟುಂಬಸ್ಥರು ಮರುಪಾವತಿಸುವಾಗ ಈ ನಿಧಿಯಿಂದ ನಿಯಾಮಾನುಸಾರ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ನಿಗಧಿ ಮಾಡಿರುವ ಹಾಲಿ ಸದಸ್ಯರು ಸದ್ರಿ ನಿಧಿಯಲ್ಲಿ ಹೂಡಿರುವ ಮೊತ್ತಕ್ಕೆ ಈ ಹಿಂದೆ ನಿಗದಿಪಡಿಸಿದ್ದ ೭ ಪಟ್ಟು ಮೊತ್ತಕ್ಕೆ ಬದಲಾಗಿ ೯ ಪಟ್ಟು ಮೊತ್ತವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡಿ ಮೃತ ಸಾಲಗಾರ ಸದಸ್ಯನ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದ ಈ ನಿಧಿ ಅನುಕೂಲವಾಗುವುದೆಂದು ತಿಳಿಯಪಡಿಸುತ್ತೇವೆ.
ಹಾಗೂ ಸಂಘದಲ್ಲಿ ಸದಸ್ಯರು ಮರಣ ನಿಧಿಯ ಪೂರ್ಣ ಪ್ರಮಾಣದ ವಂತಿಕೆಯನ್ನು ಪಾವತಿಸಿದ್ದಲ್ಲಿ, ಅಂದರೆ ೬೦ ವರ್ಷ ಒಳಪಟ್ಟವರು ರೂ.೧,೦೦೦/- ಮತ್ತು ೬೦ ವರ್ಷ ಮೇಲ್ಪಟ್ಟವರು ರೂ.೧,೫೦೦/- ವಂತಿಕೆ ಪಾವತಿಸಿದ್ದಲ್ಲಿ, ಅಂತಹ ಸದಸ್ಯರು ಮೃತಹೊಂದಿದ ಸಂದರ್ಭದಲ್ಲಿ ವಂತಿಕೆ ಸೇರಿಸಿ ರೂ.೧೦,೦೦೦/- ಗಳನ್ನು ಮರಣ ಪರಿಹಾರ ನಿಧಿಯಿಂದ ಮೃತ ಹೊಂದಿದವರ ಅಂತ್ಯಕ್ರಿಯೆ ಕಾರ್ಯಗಳಿಗೆ ಪರಿಹಾರ ಧನವನ್ನಾಗಿ ನೀಡುತ್ತಿರುತ್ತೇವೆ.
ಸಂಘದ ಕಾರ್ಯವ್ಯಾಪ್ತಿಯಲ್ಲಿನ ಮಹಿಳಾ ಸದಸ್ಯರು ಮತ್ತು ನಾಮಮಾತ್ರ ಸದಸ್ಯರ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ನಾವುಗಳು ಪ್ರಾರಂಭಿಸಿದ ವನಿತಾ ಬಂಧು ಮತ್ತು ಜನಚೈತನ್ಯ ಎಂಬ ಜಂಟಿ ಭಾದ್ಯತಾ ಗುಂಪು ಸಾಲ ಯೋಜನೆಯು ಯಶಸ್ವಿಯಾಗಿದ್ದು ಈ ಯೋಜನೆಯಡಿಯಲ್ಲಿ ಒಟ್ಟು ೮೮೭ ಮಹಿಳೆಯರಿಗೆ ವರದಿ ಸಾಲಿನಲ್ಲಿ ರೂ ೫.೮೩ ಕೋಟಿ ಸಾಲ ವಿತರಿಸಿದ್ದು ವಾರ್ಷಿಕ ಅಂತ್ಯಕ್ಕೆ ಒಟ್ಟಾಗಿ ೬.೫೨ ಕೋಟಿ ಬರಲು ಬಾಕಿಯಿದ್ದು ಈ ಸಾಲದ ಯೋಜನೆಯಿಂದ ಎಲ್ಲಾ ವರ್ಗದ ಮಹಿಳೆಯರು ಆರ್ಥಿಕ ಸಬಲತೆಯತ್ತ್ತ ಹೋಗುತ್ತಿರುವುದು ಸಂಘಕ್ಕೆ ಒಂದು ಹೆಗ್ಗಳಿಕೆಯ ವಿಚಾರವಾಗಿರುತ್ತದೆ.

ಸಂಘದ ಸದಸ್ಯರುಗಳಿಗೆ ಸಂಘದಿAದ ವಿತರಿಸುವÀ ಸಾಲಗಳ ಮಿತಿಯನ್ನು ಕೆಳಕಂಡAತೆ ಹೆಚ್ಚಿಸಲಾಗಿದೆ

[೧] ಜಾಮೀನು ಸಾಲದ ಮಿತಿ ರೂ ೩ ಲಕ್ಷ [೨] ಮದ್ಯಮಾವಧಿ ಗಿರ್ವಿ ಸಾಲ, ಮನೆ ರಿಪೇರಿ, ಮನೆ ಕಟ್ಟಲು ಮನೆ ಅಡಮಾನ ರೂ ೧೫ ರಿಂದ ೫೦ ಲಕ್ಷ [೩] ನಿವೇಶನ/ಕಟ್ಟಡ/ವಾಣಿಜ್ಯ ಮಳಿಗೆ ,ವಾಸದ ಮನೆ ಖರೀದಿ ಮತ್ತು ನೂತನ ಗೃಹ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಸಾಲ ರೂ ೫೦ ಲಕ್ಷ
[೪] ವ್ಯಾಪಾರ, ಕೈಗಾರಿಕೆಯನ್ನು ಅಭಿವೃದ್ದಿಪಡಿಸಲು ವ್ಯಾಪಾರಾಭಿವೃದ್ದಿ ದೀರ್ಘಾವದಿ ಸಾಲ ರೂ ೫೦ ಲಕ್ಷ [೫] ಹೊಸ ವಾಹನ ಖರೀದಿ ರೂ ೨೫ ಲಕ್ಷ [೬] ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ ವ್ಯಾಪಾರ ಮೀರಳತೆ ಸಾಲ ರೂ ೫೦ ಲಕ್ಷ [೭] ವ್ಯಾಪಾರಭಿವೃದ್ಧಿ ಸಲಾ ೩ ಲಕ್ಷ [೮] ವನಿತಾ ಬಂಧು ಮಹಿಳಾ ಗುಂಪು ಸಾಲ ೨.೫ ಲಕ್ಷ [೯] ಸ್ವ-ಸಹಾಯ ಗುಂಪು ಸಾಲ ೧೫ ಲಕ್ಷ [೧೦] ಭದ್ರತಾ ಠೇವಣಿ ಸಾಲ-ಭದ್ರತಾ ಠೇವಣಿಯ ಮೇಲೆ ೮೦% ರಷ್ಟು.
ನಮ್ಮ ಸಂಘದ ಸದಸ್ಯರು ಸಾಲಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕಾಗಿಯೂ ಹಾಗೂ ಪಡೆದುಕೊಂಡAತಹ ಸಾಲಗಳನು ಸಕಾಲದಲ್ಲಿ ಮರುಪಾವತಿ ಮಾಡಬೇಕಾಗಿ ತಮ್ಮಗಳಿಗೆ ತಿಳಿಯಪಡಿಸುತ್ತಿದ್ದೇವೆ.
ಸಂಘದಲ್ಲಿ ತೊಡಗಿಸಿರುವ ನಿರಖು ಠೇವಣಿಗೂ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಿಗೆ ಶೇಕಡಾ ೦.೨೫ ಹೆಚ್ಚಿನ ಬಡ್ಡಿ ನೀಡುತ್ತಿದ್ದೇವೆ. ಸಂಘದ ನೂತನ ಕಟ್ಟಡದಲ್ಲಿ ಅರ್.ಬಿ.ಐ. ಮಾನದಂಡದAತೆ ನಿರ್ಮಾಣ ಮಾಡಿರುವ ಭದ್ರತಾ ಕೊಠಡಿಯೊಳಗೆ ಲಾಕರ್ ಸೌಲಭ್ಯವು ಸದಸ್ಯರು ಮತ್ತು ಗ್ರಾಹಕರಿಗೆ ದೊರೆಯುತ್ತದೆ.
ಪ್ರತಿ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ ೧೦ನೇ ತರಗತಿ, ದ್ವಿತೀಯ ಪಿ.ಯು.ಸಿ., ಅಂತಿಮ ಪದವಿ ಪರೀಕ್ಷೆ, ಡಿಪ್ಲೊಮ ಮತ್ತು ಕೊನೆಯ ಇಂಜಿನಿಯರಿAಗ್ ಪರೀಕ್ಷೆ, ವೈದ್ಯಕೀಯ ಪದವೀಧÀರರಿಗೂ ಉತ್ತಮ ಅಂಕಗಳಿಸಿರುವAತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ಕಳೆದ ೧೫ ವರ್ಷಗಳಿಂದಲೂ ನೀಡುತ್ತಿದ್ದೇವೆ. ಸದಸ್ಯರ ಮಕ್ಕಳು ರಾಷ್ಟçಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವ ಕ್ರೀಡಾಸ್ಪರ್ಧಿಗಳಿಗೆ ಬಹುಮಾನ ವ್ಯವಸ್ಥೆ ಮಾಡುತ್ತಿದ್ದೇವೆ.
ಸಂಘವು ಶತಮಾನೋತ್ಸವ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರಿನಲ್ಲಿ ೨ ಎಕರೆ ನಿವೇಶನದಲ್ಲಿ ಇದೀಗ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿಯು ನಡೆಯುತ್ತಿದ್ದು, ಮುಂದಿನ ವರ್ಷ ಅಂದರೆ ೨೦೨೬ ರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಉದ್ಘಾಟನೆ ಮಾಡುವವರಿದ್ದೇವೆ ಎಂದು ತಮಗೆಲ್ಲ ಅತಿ ಹರ್ಷದಿಂದ ತಿಳಿಸುತ್ತಿದ್ದೇವೆ.
ನಮ್ಮ ಸಹಕಾರ ಸಂಘದಿAದ ಹಾಲು ಉತ್ಪಾದಕರ ಸಹಕಾರ ಸಂಘ, ಗೊಂದಿಬಸವನಹಳ್ಳಿ ಇವರಿಗೆ, ಸದ್ರಿ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ.೫೦,೦೦೦/- ಗಳನ್ನು ನೀಡಿರುತ್ತೇವೆ. ಹಾಗೂ ನಂ.೩೮೧೮೫ ನೇ ನಾಡಪ್ರಭು ಪತ್ತಿನ ಸಹಕಾರ ಸಂಘ ನಿ., ಕುಶಾಲನಗರ ರವರ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ.೫೦,೦೦೦/- ಗಳನ್ನು ಮಂಜೂರು ಮಾಡಿದ್ದೇವೆ. ನಮ್ಮ ಕಾರ್ಯಕ್ಷೇತ್ರದ ಕೋಣಮಾರಿಯಮ್ಮ ದೇವಸ್ಥಾನದ ಕಟ್ಟಡ ಅಭಿವೃದ್ಧಿಗೆ ರೂ.೨೫,೦೦೦/- ಗಳನ್ನು ನೀಡಿರುತ್ತೇವೆ. ಇದು ನಾವುಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಒಂದು ಉದಾಹರಣೆಯಾಗಿರುವುದನ್ನು ತಮಗೆ ತಿಳಿಸುತ್ತಿದ್ದೇವೆ.

ಮಹಾಸಭೆ
ಸಂಘದ ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ ೦೭-೦೯-೨೦೨೫ ನೇ ಭಾನುವಾರ ಪೂರ್ವಾಹ್ನ ೧೧.೦೦ ಗಂಟೆಗೆ ಸಂಘದ ಅಧ್ಯಕ್ಷರಾದ ಶ್ರೀಯುತ ಟಿ.ಆರ್ ಶರವಣಕುಮಾರ್‌ರವರ ಅಧ್ಯಕ್ಷತೆಯಲ್ಲಿ ಕುಶಾಲನಗರದ ಗಾಯಿತ್ರಿ ಕಲ್ಯಾಣ ಮಂಟಪ, ತ್ಯಾಗರಾಜ ರಸ್ತೆ, ಕುಶಾಲನಗರ ಇಲ್ಲಿ ಮಹಾಸಭೆಯನ್ನು ಕರೆಯಲಾಗಿದೆ. ಆದುದರಿಂದ ಮಹಾಸಭೆಗೆ ಸರ್ವ ಸದಸ್ಯರು ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಮಹಾಸಭೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಕೋರಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!