ಕಾರ್ಯಕ್ರಮ

ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ

ಕುಶಾಲನಗರ, ಸೆ 03:ಕುಶಾಲನಗರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಬಳಿ ನಿರ್ಮಾಣಗೊಂಡಿರುವ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ ಲೋಕಾರ್ಪಣೆಗೊಳಿಸಿದರು.

ಬಳಿಕ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ರಾಂತಿ, ಆರ್ಥಿಕ ಪ್ರಗತಿ ಹಾಗೂ ಸಹಕಾರ ಕ್ಷೇತ್ರದ ಬೆಳವಣಿಗೆಯಿಂದ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರದ ಭಾರತದ ನಡುವೆ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ‌, ಅಮೂಲಾಗ್ರ ಅಭಿವೃದ್ಧಿ ಹೊಂದಿದೆ. ಇತರೆ ಮುಂದುವರೆದ ದೇಶಗಳ ಪೈಕಿ ಭಾರತ ಕೂಡ ಅಗ್ರ ಸ್ಥಾನ ಗಳಿಸಿರುವುದರ ಹಿಂದೆ ಸಂತರು, ಸ್ವಾಮೀಜಿಗಳು, ರೈತರು, ಸಹಕಾರಿಗಳ ಕೊಡುಗೆ‌ ಅನನ್ಯವಾಗಿದೆ. ಭಾರತದ ವಿದ್ಯಾವಂತ ಸಮಾಜ ತನ್ನ ಕಲೆ,‌ ಕೌಶಲ್ಯ, ಛಾಪಿನಿಂದ ಇತರೆ ದೇಶದವರನ್ನು ಚಿಂತಿಸುವಂತೆ ಮಾಡಿದೆ ಎಂದರು.

ಆರ್ಥಿಕ ಸಮೃದ್ದತೆಯಿಂದ ಸ್ವಾಭಿಮಾನದ ಬದುಕಿಗೆ ಅವಕಾಶವಿದೆ. ಆದ್ದರಿಂದ ಸಹಕಾರ ಸದಸ್ಯರು ಯಾರೂ ಕೂಡ ನಿರ್ಲಕ್ಷ್ಯ ಮಾಡದೆ, ಉದಾಸಿನರಾಗದೆ ಸಂಘದ ವಹಿವಾಟುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಹಕಾರ ಸಂಘ, ಸಮಾಜ ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡಬೇಕಿದೆ ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕೊಡಗು ಜಿಲ್ಲೆ ವಿಶೇಷ ಸಾಧನೆ ತೋರುತ್ತಿದೆ. ಸಹಕಾರ ಸಂಘಗಳ ಮೂಲಕ
ಬಡವರಿಗೆ, ಸದಸ್ಯರಿಗೆ ಹೆಚ್ಚಿನ ಅನುಕೂಲ ಆಗಬೇಕು. ಈ ಸಹಕಾರ ಸಂಘದ ನೂತನ ಕಟ್ಟಡ ಶತಮಾನಗಳ ಸಾಧನೆ ತೋರುವಂತಾಗಬೇಕಿದೆ. ಉತ್ತಮ ಕಾರ್ಯನಿರ್ವಹಣೆಗೆ ಪ್ರಸಿದ್ದಿಯಾಗಬೇಕಿದೆ. ಸಂಘಕ್ಕೆ ರೂ 10 ಲಕ್ಷ ಅನುದಾನ ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ,
ಪಟ್ಟಣದಲ್ಲಿ ಕಳೆದ 9 ವರ್ಷಗಳ ಹಿಂದೆ ಆರಂಭಗೊಂಡ ನಾಡಪ್ರಭು ಪತ್ತಿನ‌ ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಂಘದ ಲಾಭಾಂಶದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಸಂಘದಲ್ಲಿ 960 ಸದಸ್ಯರು ಇದ್ದು, ಎಲ್ಲರ ಸಹಕಾರದಿಂದ ಹಾಗೂ ಎಂ.ಡಿ.ನಾಗೇಶ್ ಮತ್ತು ಕುಟುಂಬಸ್ಥರು ದಾನ ನೀಡಿದ ನಿವೇಶನದಲ್ಲಿ ಸುಂದರವಾದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ.ಇದು ನಮ್ಮ ಸಂಘದ ದೊಡ್ಡ ಸಾಧನೆ ಎಂದು ಹೇಳಿದರು.

ಈ ಸಂದರ್ಭ
ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ,
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ,
ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಆರ್‌.ಶರವಣಕುಮಾರ್,
ನಾಡಪ್ರಭು ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ಉಪಾಧ್ಯಕ್ಷ ಜಿ.ಬಿ.ಜಗದೀಶ್, ನಿರ್ದೇಶಕರಾದ ಸಿ.ವಿ.ನಾಗೇಶ್,ಎಂ.ಡಿ.ರವಿಕುಮಾರ್, ಕೆ.ಕೆ.ಹೇಮ್ ಕುಮಾರ್,ಕೆ.ಪಿ.ರಾಜು,ಎಸ್.ಸಿ.ಪ್ರಕಾಶ್,ಕಸ್ತೂರಿ ಮಹೇಶ್,ರೇಖಾ,ಎಂ.ಡಿ.ರಮೇಶ್,ಎಚ್.ಎನ್.ರಾಮಚಂದ್ರ,ಸತೀಶ್ ಗೌಡ, ಎಂ.ಎ.ರಘು,ಎಂ.ಕೆ.ಮಂಜುನಾಥ್, ಪ್ರಮೀಳಾಕುಮಾರಸ್ವಾಮಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೆ.ಸುನೀತಾ ಪಾಲ್ಗೊಂಡಿದ್ದರು.

ಸಂಘಕ್ಕೆ ಜಾಗ ದಾನ ನೀಡಿದ ಎಂ.ಡಿ.ನಾಗೇಶ್ ಮತ್ತು ಕುಟುಂಬಸ್ಥರನ್ನು ಹಾಗೂ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಂಘದ ಉಪಾಧ್ಯಕ್ಷ ಜಿ.ಬಿ.ಜಗದೀಶ್ ನಿವಾಸದಲ್ಲಿ ಸ್ವಾಮೀಜಿಗೆ ಪಾದಪೂಜೆ ಕಾರ್ಯ ನೆರವೇರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!