ಸಭೆ

ಕೂಡಿಗೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕುಶಾಲನಗರ, ಆ. 19: ಕೂಡಿಗೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಹಾಲು ಉತ್ಪಾದಕರ ಸಂಘಗಳ ನೂತನ ಕಟ್ಟಡದ ನಿರ್ಮಾಣಕ್ಕೆ ಒಕ್ಕೂಟದ ವತಿಯಿಂದ 7.50 ಲಕ್ಷ ಹಣವನ್ನು ನೀಡಲಾಗುವುದು. ಸಂಘದ ಹೆಸರಿಗೆ ಜಾಗದ ಖಾತೆಯನ್ನು ಸರಿಪಡಿಸಿಕೊಂಡು ಒಕ್ಕೂಟದ ಅನುದಾನವನ್ನು ಪಡೆಯಬೇಕು. ಜೊತೆಯಲ್ಲಿ ಸಂಘದ ಅಭಿವೃದ್ಧಿಗೆ ಸಹಕಾರ ಸಂಘದ ಸದಸ್ಯರು ಗುಣಮಟ್ಟದ ಹಾಲನ್ನು ಹಾಕುವುದರ ಮೂಲಕ ಸಹಕಾರಿಗಳಾಗಬೇಕು‌ ಅದರ ಮುಖೇನ ಸಂಘದ ಅಭಿವೃದ್ಧಿ ಸಾಧ್ಯ ಎಂದರು.
ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ಬಿ. ವೀಣಾ ಮಾತನಾಡಿ, ಹಾಲು ಉತ್ಪಾದಕರು ತಮ್ಮ ಹಸುಗಳಿಗೆ ಉತ್ತಮವಾದ ಹಸಿ ಮೇವಿನ ಜೊತೆಯಲ್ಲಿ ಒಣ ಮೇನಿನ ಆಹಾರ ನೀಡಬೇಕು. ಪಶುಗಳ ಆರೈಕೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ರಾಧ ವಹಿಸಿ ಮಾತನಾಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಅಶ್ವಿನಿ, ನಿರ್ದೇಶಕರುಗಳಾದ ಭಾರತಿ,ವೀಣಾ,ವಿಜಯ,ಲಕ್ಷ್ಮಿ ,ಪಂಕಜ,ಸಾಕಮ್ಮ,ಪಲ್ಲವಿ,ಮಣಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಿ. ಲಕ್ಷ್ಮಿ ವಾರ್ಷಿಕ ವರದಿ ವಾಚಿಸಿ,ಸ್ವಾಗತಿಸಿ, ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!