ಮಳೆ

ಹಾರಂಗಿ‌‌ ಕಿರು ಸೇತುವೆ ಮುಳುಗಡೆ: ನದಿ ತಟದ ಜನತೆ ಎಚ್ಚರವಹಿಸಲು ಸೂಚನೆ

ಕುಶಾಲನಗರ, ಆ 07: ಕೊಡಗು ಜಿಲ್ಲೆಯಲ್ಲಿ‌ ಎಡೆಬಿಡದೆ‌ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯಕ್ಕೆ ನೀರಿನ‌ ಒಳಹರಿವು ಹೆಚ್ಚಳವಾಗಿದೆ. ಜಲಾಶಯದಿಂದ 20 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಹರಿಸಿದ ಕಾರಣ ಅಣೆಕಟ್ಟೆ ಮುಂಭಾಗದ ಕಿರು ಸೇತುವೆ ಮುಳುಗಡೆಯಾಗಿದೆ‌. ಸೇತುವೆ ಮುಳುಗಡೆ ಕಾರಣ ಗುಡ್ಡೆಹೊಸೂರು-ಅತ್ತೂರು-ಸೋಮವಾರಪೇಟೆಗೆ ತೆರಳುವ ರಸ್ತೆ ಸಂಚಾರ ಬಂದ್ ಆಗಿದೆ. ನದಿ ತಟದ ಜನರಿಗೆ ಅಪಾಯದ ಮುನ್ಸೂಚನೆ ನೀಡಿ‌ ನದಿಗೆ ನೀರು ಹರಿಸಲಾಗುತ್ತಿದ್ದು ನದಿ ತಟದ ಜನತೆ ಎಚ್ಚರಿಕೆ ವಹಿಸಬೇಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!