ಕುಶಾಲನಗರ, ಆ 07: ಕುಶಾಲನಗರದಲ್ಲಿ ಅಪಾಯದ ಮಟ್ಟದಲ್ಲಿ ಕಾವೇರಿ ನದಿ ಹರಿಯುತ್ತಿದ್ದು ತಗ್ಗು ಪ್ರದೇಶಗಳತ್ತ ನದಿ ನೀರು ಮುಖ ಮಾಡಿದೆ.
ಗಂಧದಕೋಟಿ ರಾಜ್ಯ ಹೆದ್ದಾರಿ ಬಳಿ ಗದ್ದೆಗಳು ಜಲಾವೃತಗೊಂಡಿವೆ.
ಭಾರೀ ಮಳೆ ಮುಂದುವರೆದರೆ ಸಂಜೆ ವೇಳೆಗೆ ರಸ್ತೆ ಮುಳುಗಡೆ ಸಾಧ್ಯತೆಯ ಆತಂಕ ಮನೆ ಮಾಡಿದೆ
ಕಾಲುವೆಗಳು ತುಂಬಿ ಹರಿದ ಕಾರಣ ಗಂಧದಕೋಟಿ ಬಳಿ ನರ್ಸರಿ ಮುಳುಗಡೆ ಭೀತಿಯಿಂದ
ಗಿಡಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಹಾರಂಗಿಯಿಂದ 20 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದ್ದು ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹ ಭೀತಿ ಎದುರಾಗಿದೆ.
Back to top button
error: Content is protected !!