ಕುಶಾಲನಗರ, ಆ 15: 79ನೇ ಸ್ವಾತಂತ್ರ್ಯೋತ್ಸವವನ್ನು ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ನಂಜರಾಯಪಟ್ಟಣ ನೂರು ಇಸ್ಲಾಂ ಮದರಸದಲ್ಲಿ ಅತಿ ವಿಜ್ರಂಬಣೆಯಿಂದ ಆಚರಿಸಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷರಾದ ಎಂ ಈ ಅಬ್ಬಾಸ್ ರವರು ಧ್ವಜಾರೋಹಣ ನೆರವೇರಿಸಿದರು. ಸಭೆಯ ಉದ್ಘಾಟನೆಯನ್ನು ಜಮಾತಿನ ಧರ್ಮ ಗುರುಗಳಾದ ಮಹಮದ್ ಉಸ್ತಾದ್ ರವರು ನೆರವೇರಿಸಿದರು. ಜಮಾತಿನ ಉಪಾಧ್ಯಕ್ಷರಾದ ಕೆ ಎ ಅನೀಸ್ ರವರು ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕರಾದ ಬಿ ಎಸ್ ಮುಸ್ತಫ ಹಾಗೂ ಕೆ ಎಸ್ ಜಲಾಲುದ್ದೀನ್ ರವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಲಾಯಿತು . ನೂರುಲ್ ಇಸ್ಲಾಂ ಮದರಸದ ವಿದ್ಯಾರ್ಥಿ ನಾಯಕ ಎಲ್ಲರಿಗೂ ಪ್ರತಿಜ್ಞಾವಿಧಿ ಹೇಳಿಕೊಟ್ಟರು. ನಂತರ ಎಲ್ಲರಿಗೆ ಸಿಹಿಯನ್ನು ವಿತರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 19 /08/2025 ರಂದು ಮೂರನೇ ವರ್ಷದ ಸಾರ್ವಜನಿಕ ರಕ್ತದಾನ ಶಿಬಿರವನ್ನು ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ನಂಜರಾಯಪಟ್ಟಣ ನೂರುಲ್ ಇಸ್ಲಾಂ ಮದರಸದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜಮಾತಿನ ಅಧ್ಯಕ್ಷರಾದ ಎಂಇ ಅಬ್ಬಾಸ್, ಉಪಾಧ್ಯಕ್ಷರಾದ ಕೆ ಎ ಅನೀಸ್, ಕಾರ್ಯದರ್ಶಿಯವರಾದ ಬಿ ಎಸ್ ಮುಸ್ತಫ, ಸಹ ಕಾರ್ಯದರ್ಶಿಯವರಾದ ಕೆಬಿ ಮೊಹಮ್ಮದ್ ರಿಯಾಜ್, ಸದಸ್ಯರಾದ ಅಬ್ದುಲ್ ರಹಮಾನ್ ಬಿ ಎಸ್, ಹ್ಯಾರಿಸ್ ಎಂ ಎಂ ,ಹನೀಫ್ ಅಶ್ರಫಿ ಪಿ ಎ ,ಧರ್ಮ ಗುರುಗಳಾದ ಮಹಮುದ್ ಸಆದಿ ಉಸ್ತಾದ್ ಮತ್ತು ಮಹಮ್ಮದ್ ಉಸ್ತಾದ್ ಮಾಜಿ ಅಧ್ಯಕ್ಷರಾದ ಕೆ ಪಿ ಮೊಹಮ್ಮದ್, ಕೆ ಬಿ ಅಬ್ದುಲ್ಲ, ಎಂ ಎ ಅಮೀರ್ ಮಾಜಿ ಕಾರ್ಯದರ್ಶಿಯಾದ ಹ್ಯಾರಿಸ್ ಪಿಎ, ಸದಸ್ಯರಾದ ರಜಾಕ್, ನೌಶದ್, ಶರೀಫ್, ಇರ್ಷದ್, ಜೈರುದ್ದೀನ್, ಅಲಿಯಾರ್, ಬಶೀರ್, ಹಾಗೂ ಗ್ರಾಮಸ್ಥರು ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Back to top button
error: Content is protected !!