ಕುಶಾಲನಗರ, ಆ 13: : ಪಟ್ಟಣದ ಐತಿಹಾಸಿಕ ಹಿನ್ನೆಲೆಯಲ್ಲಿ ಹೊಂದಿರುವ ಇಲ್ಲಿನ ಜನರ ಆರಾಧ್ಯದೈವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಉದ್ಯಮಿ ಫ್ರೆಸರ್ ಪೇಟೆಯ ಗತಲಕ್ಷ್ಮಯ್ಯ ಶೆಟ್ಟಿ ಯವರ ಮೊಮ್ಮಕ್ಕಳಾದ ಎಫ್ .ಎಲ್.ಮಣಿಯವರು ಅವರ ಅಜ್ಜ, ಅಜ್ಜಿ ಯವರ ಹೆಸರಿನಲ್ಲಿ ಮತ್ತು ಮಾತಾ ಪಿತೃ ಗಳ ಹೆಸರಿನಲ್ಲಿ ಬುಧವಾರ ಶಕ್ತಿ ಗಣಪತಿ 16 ನೇ ಅವತಾರದ ರಜತ ಕವಚ ಸಮರ್ಪಣೆ ಮಾಡಿದರು.
ಬುಧವಾರ ದೇವಾಲಯದಲ್ಲಿ ಪ್ರಧಾನ ಅರ್ಚಕ ನಾಗೇಂದ್ರ ಬಾಬು ಮತ್ತು ರಾಘವೇಂದ್ರ ಭಟ್ಟರು ನೇತೃತ್ವದಲ್ಲಿ ಗಣಪತಿ ಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ನೂತನ ರಜತ ಕವಚಕ್ಕೆ ಪೂಜೆ ಪುರಸ್ಕಾರ ನೆರವೇರಿಸಿದ ಬಳಿಕ ಉದ್ಯಮಿ ಎಫ್ .ಎಲ್.ಮಣಿ ಹಾಗೂ ಅವರ ಕುಟುಂಬದವರು ಶಿಲ್ಪಿ ಮಂಗಳೂರಿನ ಉಮೇಶ್ ಆಚಾರ್ಯ ಅವರಿಂದ ಸಿದ್ಧಪಡಿಸಲಾದ ವಿಗ್ರಹವನ್ನು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ.ದಿನೇಶ್ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭ ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಬಾಬು ಮಾತನಾಡಿ, ಶ್ರೀ ಮಹಾಗಣಪತಿ 32 ಅವತಾರ ಗಳನ್ನು ಹೊಂದಿದ್ದು,ಈ ವಿಚಾರ ಕುರಿತು ಭಕ್ತರಿಗೆ ತಿಳಿಸಿ ಅವರಿಂದ ಕವಚಗಳನ್ನು ದಾನ ರೂಪದಲ್ಲಿ ಪಡೆದು ಪ್ರತಿ ದಿನ ಈ ಕವಚಗಳನ್ನು ಧರಿಸಿ ವಿಶೇಷ ಪೂಜೆ ಸಲ್ಲಿಸುವ ಉದ್ದೇಶ ಹೊಂದಲಾಗಿದೆ ಎಂದರು.ಈ ವಿಚಾರ ಕುರಿತು ಮಣಿ ಅವರಿಗೆ ತಿಳಿಸಿದ ಮೇರೆಗೆ ಇಂದು ಕುಟುಂಬ ವರ್ಗದ ಪರವಾಗಿ ನೂತನ ರಜತಕವಚ ದಾನವಾಗಿ ನೀಡಿದ್ದಾರೆ. ಇವರಿಗೆ ಹಾಗೂ ಇವರ ಕುಟುಂಬ ವರ್ಗಕ್ಕೆ ಭಗವಂತ ಮಹಾಗಣಪತಿ ಸಕಲ ಸಂಪತ್ತು, ಆರೋಗ್ಯ ವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಇದೇ ಸಂದರ್ಭ ನಂಜರಾಯಪಟ್ಟಣ ಕಾಫಿ ಬೆಳೆಗಾರರಾದ ಕರುಂಬಯ್ಯ ಮತ್ತು ಕವಿತಾ ಅಭಿಷೇಕ ಪಾತ್ರೆ ದಾನವಾಗಿ ನೀಡಿದರು.
ದೇವಾಲಯ ಸಮಿತಿ ವತಿಯಿಂದ ದಾನಿಗಳಾದ ಮಣಿ ಹಾಗೂ ಕುಟುಂಬ ಮತ್ತು ಕರುಂಬಯ್ಯ ಅವರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ವಿ.ಎನ್.ವಸಂತ ಕುಮಾರ್ ವ್ಯವಸ್ಥಾಪಕ ಶ್ರೀನಿವಾಸ್ ರಾವ್, ಸಂಘಟನಾ ಕಾರ್ಯದರ್ಶಿ ಕೆ.ಎನ್.ದೇವರಾಜು ಮತ್ತಿತರರು ಪಾಲ್ಗೊಂಡಿದ್ದರು.
Back to top button
error: Content is protected !!