ಸಭೆ

ಕುಶಾಲನಗರ ಸ.ಮಾ.ಪ್ರಾ.ಶಾಲೆಯ‌ ಹಿರಿಯ‌ ವಿದ್ಯಾರ್ಥಿಗಳ ಸಂಘದ ಸಭೆ

ಕುಶಾಲನಗರ, ಆ 07: ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯುvಸಂಘದ ಅಧ್ಯಕ್ಷರಾದ ವಿ. ಪಿ. ಶಶಿಧರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

*ಮೊದಲಿಗೆ ಸರ್ವರನ್ನು ಸಂಘದ ಉಪಾಧ್ಯಕ್ಷರಾದ ಎಂ. ವಿ. ನಾರಾಯಣ ರವರು ಸ್ವಾಗತಿಸಿದರು*,

*ಸಂಘದ ಖಜಾಂಜಿ ಎಸ್. ಕೆ. ಸತೀಶ್ ರವರು ಲೆಕ್ಕ ಪತ್ರ ಮಂಡನೆ ಮಾಡಿದರು*,

*ಸಂಘದ ಲೋಗೋವನ್ನು ಅಂತಿಮಗೊಳಿಸಿ ಸದಸ್ಯತ್ವ ನೊಂದಣಿ ಅರ್ಜಿ ಹಾಗೂ* *ಇನ್ನು ಮುಂತಾದ ಮುದ್ರಣ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸಂಘದ ಸಹಕಾರ್ಯದರ್ಶಿ*
*ಕೆ. ಎನ್. ದೇವರಾಜ್ ರವರಿಗೆ ಸಭೆಯಲ್ಲಿ ಅಭಿನಂದಿಸಲಾಯಿತು*,

*ಶತಮಾನೋತ್ಸವದ ಕಟ್ಟಡ ನಿರ್ಮಾಣ ಮಾಡುವ ಸ್ಥಳದಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸಲು ಇಲಾಖೆಯಿಂದ ಅನುಮತಿ ಪಡೆಯಲು ಶ್ರಮಿಸಿದ ಸಂಘದ ಕಾರ್ಯದರ್ಶಿ ಎಂ. ಇ. ಮೊಹಿದ್ದೀನ್ ರವರಿಗೆ ಸಭೆಯಲ್ಲಿ ಅಭಿನಂದಿಸಿ ನಿರ್ಣಯ ಕೈಗೊಳ್ಳಲಾಯಿತು*.

*ಸಂಘದ ಮುಂದಿನ ಕಾರ್ಯಯೋಜನೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು*.

*2025 ಆಗಸ್ಟ್ 15 ಶುಕ್ರವಾರ ದಂದು ಸಂಜೆ 4:30ಘಂಟೆಗೆ ನಮ್ಮ ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ*,

*ಜಿಎಂಪಿ ಶಾಲಾ ಆವರಣದಲ್ಲಿ ಸಂಘದ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲು ನಿರ್ಣಯ ಕೈಗೊಳ್ಳಲಾಯಿತು.*

*ನಮ್ಮ ಶಾಲೆಯ ಬಗ್ಗೆ ಒಂದು ಕಿರು ಚಿತ್ರ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.*

*ಈ ತಿಂಗಳು 10ರಿಂದ ಮಳೆಗಾಲದ ಅಧಿವೇಶನ ಪ್ರಾರಂಭಗೊಳ್ಳುವುದರಿಂದ ನಮ್ಮ ಶಾಲೆಯ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಅನುದಾನ ಪಡೆಯಲು ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನ ಕೈಗೊಳ್ಳಲಾಯಿತು*.

*ಕೊನೆಯದಾಗಿ ಸಂಘದ ಕಾರ್ಯದರ್ಶಿ ಎಂ. ಇ. ಮೊಹಿದ್ದೀನ್ ರವರು ವಂದನಾರ್ಪಣೆ ಸಲ್ಲಿಸಿದರು*.

Related Articles

Leave a Reply

Your email address will not be published. Required fields are marked *

Back to top button
error: Content is protected !!