ಕುಶಾಲನಗರ, ಜು 26: ಕುಶಾಲನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಹಕ್ಕೆ ಗ್ರಾಮದ ಸತೀಶ್ ರವರ ಪ್ರತಿಮೆಗೆ ಗೌರವ ಸಲ್ಲಿಸುವುದರ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವ ಮೋರ್ಚ ನಗರ ಅಧ್ಯಕ್ಷರಾದ ರಾಮನಾಥನ್, ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ಆದರ್ಶ, ಮಂಡಲ ಅಧ್ಯಕ್ಷರಾದ ಗೌತಮ್, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಮಹೇಶ್ ತಿಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷರಗಳಾದ ನವನೀತ್ ಪೊನ್ನೇಟಿ, ಪ್ರವೀಣ್ ಪಲ್ಲಜಿರ, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಮೋಹಿತ್, ಪ್ರಮುಖರಾದ ಸುಮನ್, ಚಂದ್ರಶೇಖರ್ ಹೇರೂರು, ಅಜೀಷ್ ಕುಮಾರ್, ಅರುಣ ಕುಮಾರಿ ಮತ್ತು ಯೋಧನ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Back to top button
error: Content is protected !!