ಕ್ರೀಡೆ

ನಳಂದ ಗುರುಕುಲ ಶಾಲೆಯಲ್ಲಿ ವಲಯ ಮಟ್ಟದ ಅಂತರ ಶಾಲಾ ಕರಾಟೆ ಪಂದ್ಯಾವಳಿ

ಕುಶಾಲನಗರ, ಜು 26:ಸಿಐಎಸ್ಸಿಇ ಕೊಡಗು ಮತ್ತು ಮೈಸೂರು ವಲಯ ಮಟ್ಟದ ಕರಾಟೆ ಪಂದ್ಯಾವಳಿಯು ಜುಲೈ 25 , 2025 ರಂದು ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆಯಿತು. ಕುಮಾರಿ ಯಶಸ್ವಿನಿ. ಯು. ಪಿ. ರವರು ಎಲ್ಲರನ್ನು ಸ್ವಾಗತಿಸಿದರು.

ಈ ಪಂದ್ಯಾವಳಿಯ ತೀರ್ಪುಗಾರರನ್ನಾಗಿ 9ನೇ ಡಾನ್ ಬ್ಲಾಕ್ ಬೆಲ್ಟ್ ಪಡೆದ, ವಿಶ್ವದ ಶಿಟೋರಿಯೋ ಕರಾಟೆ ಸಂಘಟನೆ ಮತ್ತು ಅಖಿಲ ಭಾರತ ಶಿಟೋರಿಯೋ ಕರಾಟೆಯ ಅಧ್ಯಕ್ಷರು, ಕರಾಟೆ ಸಂಘಟನೆಯ ತಾಂತ್ರಿಕ ಆಯೋಗದ ಜಂಟಿ ಮುಖ್ಯಸ್ಥರು ಹಾಗೂ ಯುಕೆಯ ಬಮಿ೯ಂಗ್ ಹ್ಯಾಮ್ ನಲ್ಲಿ ನಡೆದ 10ನೇ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ ಆಗಿ ಭಾರತೀಯ ಕರಾಟೆ ತಂಡವನ್ನು ಮುನ್ನಡೆಸಿದ ಅರುಣ್ ಮಾಚಯ್ಯರವರನ್ನು ಆಹ್ವಾನಿಸಲಾಗಿತ್ತು. ಇವರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಕರಾಟೆ ಶೈಲಿಯಲ್ಲಿ ಪಂಚ್ ಗಳನ್ನು ಮಾಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಶ್ರೀಯುತ ಅರುಣ್ ಮಾಚಯ್ಯರವರನ್ನು ಶ್ರೀಮತಿ ಕವಿತಾ ಸಾತಪ್ಪನ್ ರವರು ನೆನಪಿನ ಕಾಣಿಕೆ ಕೊಡುವ ಮೂಲಕ ಹಾಗೂ ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಷಾಜಿ ಆಲೂಂಗಲ್ ಜೋಸೆಫ್ ರವರು ಮತ್ತು ಪ್ರಾಂಶುಪಾಲರಾದ ಡಾ. ಸಿ. ಅಂತೋಣಿ ರಾಜ್ ರವರು ಶಾಲು ಹೊದಿಸುವ ಮೂಲಕ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾದ ಅರುಣ್ ಮಾಚಯ್ಯ ಮಾತನಾಡಿ, ಕರಾಟೆಯು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಶಿಸ್ತು, ಸಂಯಮ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಸ್ವರಕ್ಷಣೆಯ ಕೌಶಲ್ಯಗಳನ್ನು ಕಲಿಸುತ್ತದೆ ಹಾಗೂ ಏಕಾಗ್ರತೆ ಮತ್ತು ಸ್ವಯಂ ನಿಯಂತ್ರಣ ಶಕ್ತಿಯನ್ನು ರೂಢಿಸುತ್ತದೆ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ಈ ಪಂದ್ಯಾವಳಿಯಲ್ಲಿ ಮೈಸೂರು ಮತ್ತು ಕೊಡಗು ವಲಯಕ್ಕೆ ಸೇರಿದ ಮಂಡ್ಯದ ಗ್ಲೋಬಲ್ ಪಬ್ಲಿಕ್ ಶಾಲೆ ಮೈಸೂರಿನ ಶಾಂತಲಾ ವಿದ್ಯಾಪೀಠ, ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆ, ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಶಾಲೆ, ಕುಶಾಲನಗರದ ಉದ್ಗಂ ಶಾಲೆ ಹಾಗೂ ನಳಂದ ಗುರುಕುಲ ಶಾಲೆಗಳಿಂದ ಒಟ್ಟು 92 ಸ್ಪರ್ಧಿಗಳು ಭಾಗವಹಿಸಿದ್ದರು.
14 ವರ್ಷ ಮೇಲ್ಪಟ್ಟ ಮತ್ತು 17 ವರ್ಷದೊಳಗಿನ ವಿವಿಧ ತೂಕಗಳ ವಿಭಾಗಗಳಲ್ಲಿ ಬಾಲಕರು ಮತ್ತು ಬಾಲಕಿಯರ ಕುಮಿಟೆ ಸ್ಪರ್ಧೆಗಳನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕವಿತಾ ಸಾತಪ್ಪನ್ ವಿಜೇತರಿಗೆ ಪದಕಗಳು ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು. ನಳಂದ ಪಬ್ಲಿಕ್ ಶಾಲೆಯು 14 ಚಿನ್ನ , 4 ಬೆಳ್ಳಿ ಪದಕಗಳು ಹಾಗೂ ಒಂದು ಕಂಚಿನ ಪದಕವನ್ನು ಪಡೆದುಕೊಳ್ಳುವ ಮೂಲಕ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಮ್ಮದಾಗಿಸಿಕೊಂಡಿತು.
ಈ ವಲಯ ಮಟ್ಟದಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡ ವಿಜೇತರೆಲ್ಲರೂ ಕರ್ನಾಟಕ ಮತ್ತು ಗೋವಾ ರಾಜ್ಯಗಳೆರಡರ ಪ್ರಾದೇಶಿಕ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ತರಬೇತುದಾರರಾದ ಎಲ್.ಜೆ.ಸಂಕೇತ್ ಹೇಳಿದರು. ಅಮೃತವರ್ಷಿಣಿ ನಿರೂಪಿಸಿದರು.
ಈ ಸಂದರ್ಭ ನಳಂದ ಶಾಲೆಯ ಪ್ರಾಂಶುಪಾಲ ಡಾ. ಸಿ. ಅಂತೋಣಿ ರಾಜ್ ರವರು ನಳಂದ ಪಿ.ಯು.ಕಾಲೇಜಿನ ಪ್ರಾಂಶುಪಾಲ ಷಾಜಿ ಅಲೂಂಗಲ್ ಜೋಸೆಫ್, ಆಡಳಿತ ಅಧಿಕಾರಿ ಓಂ ಪ್ರಕಾಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!