ಕುಶಾಲನಗರ, ಜು 25: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಹೆಬ್ಬಾಲೆಯ ನಿವಾಸಿ ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹರಗದ ಚೇತನ್ ಮಾಸ್ಟರ್ ಅವರು ಕೊಡಗಿಗೆ ಆಗಮಿಸಿದ ಸಂದರ್ಭ ಗಡಿಭಾಗ ಕಾವೇರಿ ಮಾತೆಯ ಪ್ರತಿಮೆ ಬಳಿ ಅವರನ್ನು ಬೆಂಬಲಿಗರು ಸಂಭ್ರಮದಿಂದ ಬರಮಾಡಿಕೊಂಡರು.
ಚೇತನ್ ದಂಪತಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಶಿಕ್ಷಕ ಸಂಘಟನೆ ಪ್ರಮುಖರು, ಶಿಕ್ಷಕ ವರ್ಗ, ಕುಟುಂಬಸ್ಥರು, ಸ್ನೇಹಿತರು, ಸಂಘಸಂಸ್ಥೆ ಪ್ರಮುಖರು ಅವರನ್ನು ಗೌರವಿಸಿ ಅಭಿನಂದಿಸಿ ಶುಭ ಕೋರಿದರು.
ಈ ಸಂದರ್ಭ ಮಾತನಾಡಿದ ಚೇತನ್ ಅವರು, ಶಿಕ್ಷಕರು, ನೌಕಕರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಸಂಘದ ಏಳಿಗೆಗೆ ಶ್ರಮಿಸಲಾಗುವುದು.
ಅತ್ಯಂತ ಮಹತ್ವದ ಜವಾಬ್ದಾರಿ ದೊರಕಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
Back to top button
error: Content is protected !!