ಕಾರ್ಯಕ್ರಮ

ಕುಶಾಲನಗರದಲ್ಲಿ ಮದ್ಯವರ್ಜನ ಶಿಬಿರಕ್ಕೆ ಚಾಲನೆ

ಕುಶಾಲನಗರ ಜು 17: ಕುಶಾಲನಗರ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕುಶಾಲನಗರ ಕೊಡವ ಸಮಾಜ ಮತ್ತು  ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ 1954ನೇ ಮದ್ಯವರ್ಜನ ಶಿಬಿರಕ್ಕೆ ಕುಶಾಲನಗರ ಕೊಡವ ಸಮಾಜದಲ್ಲಿ ಚಾಲನೆ ನೀಡಲಾಯಿತು. ದಿವ್ಯ ಸಾನಿಧ್ಯ ವಹಿಸಿದ್ದ
ತೊರೆನೂರು ವಿರಕ್ತ ಮಠದ ಶ್ರೀ‌‌ ಮಲ್ಲೇಶ ಸ್ವಾಮೀಜಿ ಮಂಜುನಾಥ ಸ್ವಾಮಿಗೆ ಪೂಜೆ‌ ನೆರವೇರಿಸುವ ಮೂಲಕ ಶಿಬಿರಕ್ಕೆ ಚಾಲನೆ‌ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ
ಶಶಿಧರ್ ಮಾತನಾಡಿ,ಮದ್ಯಪಾನ ಒಂದು ರೀತಿಯ ಪಿಡುಗಿದ್ದಂತೆ. ಮದ್ಯಪಾನ ಮುಕ್ತ ಸಮಾಜದ ಅವಶ್ಯಕತೆಯಿದೆ‌. ಮದ್ಯಪಾನ‌ ನಿಷೇದದ ಅಗತ್ಯತೆಯಿದೆ. ಸಾರಾಯಿ ನಿಷೇದದಂತೆ ಮದ್ಯಪಾನ ಕೂಡ ನಿಷೇದದ ಬಗ್ಗೆ ಕೂಡ ಸರಕಾರ ಚಿಂತನೆ ಹರಿಸಬೇಕಿದೆ ಎಂದರು.
ಕುಟುಂಬದ ಯಜಮಾನನಾಗಿ,‌ ಮಕ್ಕಳಿಗೆ ಮಾದರಿ ಸ್ಥಾನದಲ್ಲಿರುವ ವ್ಯಕ್ತಿ ಕೌಟುಂಬಿಕ ದೌರ್ಜನ್ಯಕ್ಕೆ‌ ಕಾರಣರಾಗದೆ, ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗದಂತೆ ಗೌರವಯುತ ಜೀವನ‌ ಕಟ್ಟಿಕೊಳ್ಳಲು ಅವರು ಕರೆ ನೀಡಿದರು.
ಮತ್ತೋರ್ವ ಅತಿಥಿ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಮಾತನಾಡಿ, ಮದ್ಯಪಾನ ಚಟಕ್ಕೆ ಬಲಿಯಾದವರು ಈ ಶಿಬಿರದ ಮೂಲಕ ಮನ ಪರಿವರ್ತನೆಗೊಂಡು, ಚಟ ಮುಕ್ತರಾಗಿ ಸಮಾಜಕ್ಕೆ ಹಾಗೂ ತಮ್ಮ ಕುಟುಂಬಕ್ಕೆ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಲು ಶುಭ ಕೋರಿದರು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ವಿ.ಡಿ.ಪುಂಡರೀಕಾಕ್ಷ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ, ಅಖಿಲ‌ ಕರ್ನಾಟಕ ಜನಜಾಗೃತಿ ಸಮಿತಿ ಕೊಡಗು ಜಿಲ್ಲಾಧ್ಯಕ್ಷ ಎ.ಟಿ.ರಂಗಸ್ವಾಮಿ, ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಕೊಡವ ಸಮಾಜ ಅಧ್ಯಕ್ಷ ಮನು‌ನಂಜುಂಡ, ಕರವೇ ಜಿಲ್ಲಾಧ್ಯಕ್ಷ ದೀಪಕ್ ನಾಯರ್, ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ನಾರಾಯಣ, ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್, ಯೋಜನೆಯ ಮೇಲ್ವಿಚಾರಕ ಕೆ.ಪಿ.ನಾಗರಾಜ್ ಸೇರಿದಂತೆ ಸಂಘಸಂಸ್ಥೆಗಳ ಪ್ರಮುಖರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಸದಸ್ಯರು ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!