ಕುಶಾಲನಗರ, ಜು 15: ಕುಶಾಲನಗರದ
ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಪೋಷಕಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಶಾಂತಿ ಬಿ ಜಿ ಯವರು ಕಾಲೇಜಿನ ಶಿಸ್ತು ಕಾಪಾಡುವಲ್ಲಿ ಪೋಷಕರ ಪಾತ್ರ ಮಹತ್ವವಾದದ್ದೆಂದು ಹೇಳಿದರು ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಕಾಲೇಜಿಗೆ ಮೊಬೈಲ್ ಗಳನ್ನು ಕೊಡಬಾರದೆಂದು ಪೋಷಕರಿಗೆ ತಿಳಿಹೇಳಿದರು ವಿದ್ಯಾರ್ಥಿಗಳು ಸಮಯ ಪರಿಪಾಲನೆ ಮಾಡುವಲ್ಲಿ ಪೋಷಕರ ಪಾತ್ರ ಹೆಚ್ಚಿನದು ಎಂದು ಹೇಳಿದರು ಪರಿಹಾರ ಬೋಧನೆ ಹಾಗೂ ವಿಶೇಷ ತರಗತಿಗಳು ನಡೆಯಲಿದ್ದು ಪೋಷಕರು ತಮ್ಮ ಮಕ್ಕಳ ಸರಿಯಾದ ಸಮಯ ಕಳುಹಿಸಬೇಕೆಂದು ವಿನಂತಿ ಮಾಡಿದರು . ಈ ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ರಾಜೇಂದ್ರ ರವರು ಉಪಸ್ಥಿತರಿದ್ದರು ಉಪನ್ಯಾಸಕರಾದ ಫಿಲಿಪ್ ವಾಸ್ ,ಮೋಹನ್ ಕುಮಾರ್, ಗುರುಸ್ವಾಮಿ, ಕೃಪಾ ,ನಾಗೇಶ್, ರಾಜು ,ವೀಣಾ, ಪ್ರಶಾಂತಿ , ನಂದೀಶ್, ಹಾಗೂ ಇತರರು ಉಪಸ್ಥಿತರಿದ್ದರು ಸೋನಿಯಾ ಸ್ವಾಗತಿಸಿ ನಿರೂಪಿಸಿದರು .
Back to top button
error: Content is protected !!