ಕುಶಾಲನಗರ, ಆ 03: ಕುಶಾಲನಗರ ಪಟ್ಟಣ ವ್ಯಾಪ್ತಿಗೆ ಹೋಲಿಸಿದರೆ ಕೂಡಿಗೆ, ಕೂಡುಮಂಗಳೂರು ಭಾಗದಲ್ಲಿ ಅತಿ ಕಡಿಮೆ ಬೆಲೆಗೆ ಚಿಕನ್ ಮಾರಾಟ ಕಂಡುಬಂದಿದೆ.
ಆಷಾಡ ಕಳೆದು ಶ್ರಾವಣ ಆರಂಭವಾಗಿದ್ದು ಮಾಂಸ ಮಾರಾಟ ಕುಂಠಿತವಾಗಿದೆ. ಗ್ರಾಹಕರನ್ನು ಸೆಳೆಯಲು ಪೈಪೋಟಿಗೆ ಬಿದ್ದಿರುವ ವ್ಯಾಪಾರಿಗಳು ಕಡಿಮೆ ದರ ನಿಗದಿ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ.
ಕುಶಾಲನಗರ ಭಾಗದಲ್ಲಿ ಕೆಜಿ ಚಿಕನ್ ಗೆ 140 ರೂ ನಿಗದಿಯಾದರೆ, ಕೂಡಿಗೆಯಲ್ಲಿ ಕೆಜಿಗೆ 130, ಕೂಡುಮಂಗಳೂರಿನಲ್ಲಿ 127, ಕೂಡ್ಲೂರು ಸ್ಟಾಲ್ ಒಂದರಲ್ಲಿ 125 ರೂ ಕೆಜಿ ಚಿಕನ್ ಮಾರಾಟ ನಡೆಯುತ್ತಿದೆ.
Back to top button
error: Content is protected !!