ಟ್ರೆಂಡಿಂಗ್

ಕುಶಾಲನಗರ ಚೆಸ್ಕಾಂ ಅಧಿಕಾರಿ ಸುಮೇಶ್ ವರ್ಗಾವಣೆ ಪ್ರಕ್ರಿಯೆ: ತೀವ್ರ ವಿರೋಧ: ಪ್ರತಿಭಟನೆ ಎಚ್ಚರಿಕೆ

ಕುಶಾಲನಗರ, ಜು 01: ಕುಶಾಲನಗರ ಚೆಸ್ಕಾಂ ಅಭಿಯಂತರ ಸುಮೇಶ್ ಅವರ ವರ್ಗಾವಣೆ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಗೊಂಡಿದೆ. ಜನಸ್ನೇಹಿ ಹಾಗೂ ಸಾರ್ವಜನಿಕರ ಬೇಡಿಗೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಅಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸದಂತೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ನಂಜರಾಯಪಟ್ಟಣ ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಒತ್ತಾಯಿಸಿದ್ದಾರೆ.

ಕಳೆದ ಐದು ತಿಂಗಳಿಂದ ಕುಶಾಲನಗರ ಚೆಸ್ಕಾಂ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಜನಸ್ನೇಹಿಯಾಗಿ ಗ್ರಾಮೀಣ ಭಾಗಗಳಾದ ನಂಜರಾಯಪಟ್ಟಣ, ಗೊಂದಿಬಸವನಹಳ್ಳಿ ಗುಮ್ಮನಕೊಲ್ಲಿಯ ಅನೇಕ ಸ್ಥಳಗಳಲ್ಲಿ ಹಲವು ವರ್ಷಗಳಿಂದ ಕತ್ತೆಲೆಯಲ್ಲಿ ಮುಳುಗಿದ್ದಂತಹ ಈ ಭಾಗಗಳಿಗೆ ಯಶಸ್ವಿಯಾಗಿ ಶಾಶ್ವತವಾಗಿ ವಿದ್ಯುತ್ ಅನ್ನು ಪೂರೈಸುವಲ್ಲಿ ಸಫಲರಾದ ಅಧಿಕಾರಿ ಪ್ರಾಮಾಣಿಕ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕಿದೆ.

ಯಾವುದೋ ರಾಜಕೀಯ ಪ್ರೇರಿತ ಪ್ರಭಾವಕ್ಕೆ ಬಿದ್ದಿರುವಂತ ಮೇಲಾಧಿಕಾರಿಗಳ ಹಾಗೂ ಜನಪ್ರತಿನಿದಿನಗಳು ಇಂತಹ ಜನಸ್ನೇಹಿ ಅಧಿಕಾರಿಯನ್ನು ವರ್ಗಾಯಿಸಿದರೆ ಉಗ್ರ ಪ್ರತಿಭಟನೆಯ ಹಮ್ಮಿಕೊಳ್ಳಲಾಗುವ ಎಚ್ಚರಿಕೆ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!