ಕಾರ್ಯಕ್ರಮ

ಕಣಿವೆಯಲ್ಲಿ ಭವನ ನಿರ್ಮಾಣ‌ ಕಾಮಗಾರಿಗೆ ಭೂಮಿಪೂಜೆ

ಕುಶಾಲನಗರ, ಜೂ 27: ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ವತಿಯಿಂದ ಕಣಿವೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭವನ ನಿರ್ಮಾಣ‌ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
5 ಸೆಂಟ್ ಜಾಗದಲ್ಲಿ 5 ಲಕ್ಷ ಅನುದಾನಲ್ಲಿ ನಿರ್ಮಾಣಗೊಳ್ಖುವ ಭವನಕ್ಕೆ ಸ್ಥಳದಾನಿ ಕೆ.ಕೆ. ದೊಡ್ಡಯ್ಯ ದಂಪತಿಗಳು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು.
ಜಿಲ್ಲಾ ಸಂಘದ ಗೌರವಾಧ್ಯಕ್ಷ ಸಿ.ಕೆ.ಉದಯಕುಮಾರ್ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ನಮ್ಮ ಈ ಸಂಘ ಹಲವು ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಅತ್ಯವಶ್ಯಕವಾಗಿದ್ದ ಭವನ ನಿರ್ಮಾಣ ಮಾಡಲು ಹಿಂದಿನ ಸಂಸದರ ಅನುದಾನದಡಿ ರೂ 5 ಲಕ್ಷ ಒದಗಿಸಿದ್ದು ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರು ರೂ 10 ಲಕ್ಷ ರೂವನ್ನು ಭವನಕ್ಕೆ ಒದಗಿಸುವ ಭರವಸೆ ನೀಡಿದ್ದಾರೆ. ಸಮುದಾಯ ಬಾಂಧವರು ಶಿಕ್ಷಣಕ್ಕೆ‌ ಹೆಚ್ಚಿನ ಒತ್ತು‌ ನೀಡಬೇಕಿದೆ ಎಂದು ಕರೆ ನೀಡಿದರು.

ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಭಾಕರ್ ಡಿ.ಆರ್.ಮಾತನಾಡಿ, ಕೊಡಗಿನಲ್ಲಿ ಕುರುಬ ಸಮಾಜ ಸುಮಾರು 12000 ಜನಸಂಖ್ಯೆಯನ್ನು ಹೊಂದಿದ್ದು ಸಮಾಜದ ಕೆಲವೊಂದು ಕಾರ್ಯ ಚಟುವಟಿಕೆಗಳಿಗೆ ಒಗ್ಗೂಡಲು ಭವನದ ಕೊರತೆಯಿತ್ತು. ಸಂಘದ ಹೆಸರಿನಲ್ಲಿರುವ ಜಾಗಕ್ಕೆ ಮೈಸೂರು ಮತ್ತು ಕೊಡಗು ಜಿಲ್ಲೆಯ ಹಿಂದಿನ ಸಂಸದ ಪ್ರತಾಪ್ ಸಿಂಹ 5 ಲಕ್ಷ ರೂ ಒದಗಿಸಿದ್ದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಸಹಕಾರ ನೀಡಿದ್ದಾರೆ. ನಮ್ಮ ಸಮಾಜದ ಎಲ್ಲಾ ಬಾಂಧವರು ಭವನವನ್ನು ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದು ಕೋರಿದರು. ಈ ಸಂದರ್ಭ ಸಂಘದ ರಾಜ್ಯ ನಿರ್ದೇಶಕಿ ಹೇಮಲತಾ ಮಂಜುನಾಥ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಸದಸ್ಯರೂ ಹಾಗೂ ಕಾಂಗ್ರೆಸ್ ವಲಯ ಅಧ್ಯಕ್ಷ ಅನಂತ್, ಸಂಘದ ಕಾರ್ಯದರ್ಶಿ ಮಂಜುನಾಥ್, ಮುಖಂಡ ಪ್ರಸನ್ನ, ಪ್ರಮುಖರಾದ ರವಿ, ಚಿಕ್ಕಯ್ಯ, ಪುಟ್ಟಸ್ವಾಮಿ, ಸ್ವಾಮಿ. ದಿನೇಶ್, ರಾಧಾ, ಮಲ್ಲೇಶ್, ಮಾದೇವ, ಕೃಷ್ಣ ಕೆ.ಕೆ, ರಮೇಶ್, ರವಿ, ಮಂಜುನಾಥ್. ರಾಜು ಡಿ, ಭರಮಣ್ಣ ಬೆಟಗೇರಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!