ಶಿಕ್ಷಣ

ಗೊಂದಿಬಸವನಹಳ್ಳಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ ಕುಶಾಲನಗರ ಪುರಸಭೆ ಸದಸ್ಯ ಜಿ.ಬಿ.ಜಗದೀಶ್

ಕುಶಾಲನಗರ, ಜೂ 10: ಕುಶಾಲನಗರ ಪುರಸಭೆ ನಾಮನಿರ್ದೇಶಿತ ಸದಸ್ಯ ಜಿ.ಬಿ.ಜಗದೀಶ್ ಅವರು ಗೊಂದಿಬಸವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿ ವಿತರಣೆ ಮಾಡಿದರು. ಶಾಲೆಯ 91 ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ನೂತನ ಶಾಸಕರು ಎರಡು ವರ್ಷದ ಅವಧಿಯಲ್ಲಿ ಒಂದೂವರೆ ಸಾವಿರ ಕೋಟಿಗೂ ಅಧಿಕ ಅನುದಾನ ಒದಗಿಸಿ ಅಭಿವೃದ್ಧಿಗೆ ಕಾರ್ಯ‌ಕೈಗೊಂಡಿದ್ದಾರೆ. ಇದೇ ಗೊಂದಿಬಸವನಹಳ್ಳಿ ಗ್ರಾಮಕ್ಕೆ ಎರಡೂವರೆ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಒದಗಿಸಿರುವುದು ಹೆಮ್ಮೆಯ ಸಂಗತಿ ಎಂದರು‌. ಮುಂದೆಯೂ ಕೂಡ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ಅನುಷ್ಠಾನಗೊಳಿಸಲು ಶಾಸಕರು ಶಕ್ತರಾಗುವಂತೆ ಆಶಿಸಿ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ
ಎಸ್ಡಿಎಂಸಿ ಉಪಾಧ್ಯಕ್ಷೆ ರೂಪಾ, ಸದಸ್ಯರಾದ‌ ನವೀನ, ರಾಜೇಶ್ವರಿ, ನೇತ್ರಾವತಿ, ಮಾಜಿ ಜನಪ್ರತಿನಿಧಿಗಳಾದ ಎಂ.ಎನ್.ಕೃಷ್ಣಪ್ಪ, ಎಂ.ಕೆ. ಉಸ್ಮಾನ್, ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!