ಮಳೆ

ಕುಶಾಲನಗರ ಪುರಸಭೆ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ ಜನಪ್ರತಿನಿಧಿಗಳು

ಕುಶಾಲನಗರ, ಮೇ 26: ಕುಶಾಲನಗರ ಪುರಸಭೆಯ  ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಪ್ರವಾಹ ಪೀಡಿತ ತಗ್ಗು ಪ್ರದೇಶ ಹಾಗೂ ಬಡಾವಣೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್ ನೇತೃತ್ವದಲ್ಲಿ ಮುಖ್ಯಾಧಿಕಾರಿ ಹಾಗೂ ಸದಸ್ಯರುಗಳು ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದರು. ಅಯ್ಯಪ್ಪಸ್ವಾಮಿ ದೇವಾಲಯ‌ ಬಳಿ ಸಾಯಿ ಬಡಾವಣೆ, ಯೋಗಾನಂದ ಬಡಾವಣೆ, ದಂಡಿನಪೇಟೆ ಭೇಟಿ ನೀಡುವುದರೊಂದಿಗೆ ರೊಂಡಕೆರೆಯನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಸದಸ್ಯರಾದ ಜಿ.ಬಿ.ಜಗದೀಶ್, ಎಂ.ಎಂ.ಪ್ರಕಾಶ್, ವಿ.ಜೆ.ನವೀನ್ ಗೌಡ, ಸುರಯ್ಯಭಾನು, ಪದ್ಮಾ, ಮುಖ್ಯಾಧಿಕಾರಿ ಗಿರೀಶ್, ಆರೋಗ್ಯ‌ ನಿರೀಕ್ಷಕ ಉದಯ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!