ಕ್ರೈಂ

ಮದ್ಯದ ಅಮಲಿನಲ್ಲಿ ಜಗಳ: ವ್ಯಕ್ತಿಯ ಕೊಲೆ

ಕುಶಾಲನಗರ, ಮೇ 07: ನಾಪೊಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕೇರಿ ಗ್ರಾಮದ ಪೂಣಚ್ಚಂಡ ಮಾದಪ್ಪ ರವರ ತೋಟದ ಲೈನುಮನೆಯಲ್ಲಿ ವಾಸವಿದ್ದ ಪಣಿ ಎರವರ ಮಂಜು ಎಂಬಾತನನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿರುವ ಕುರಿತು ದಿನಾಂಕ: 07-05-2025 ರಂದು ದೂರು ಸ್ವೀಕರಿಸಿದ್ದು, ನಾಪೋಕ್ಲು ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿರುತ್ತದೆ.

ಸದರಿ ಪ್ರಕರಣದ ಕೃತ್ಯ ನಡೆದ ಸ್ಥಳಕ್ಕೆ  ಸೂರಜ್ .ಪಿ.ಎ. ಡಿಎಸ್ಪಿ, ಮಡಿಕೇರಿ ಉಪವಿಭಾಗ,  ಅನೂಪ್ ಮಾದಪ್ಪಪಿ, ಸಿಪಿಐ, ಮಡಿಕೇರಿ ಗ್ರಾಮಾಂತರ ವೃತ್ತ,  ಶೋಭಾ ಲಮಾಣಿ, ಪಿಎಸ್‌ಐ, ಭಾಗಮಂಡಲ,  ಪ್ರಕಾಶ್, ಎಎಸ್‌ಐ, ನಾಪೋಕ್ಲು ಠಾಣೆ & ಠಾಣಾ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆಯನ್ನು ಕೈಗೊಂಡು ಮಧ್ಯಪಾನ ಮಾಡಿ ಕ್ಷುಲಕ ಕಾರಣಕ್ಕೆ ಜಗಳವಾಡಿ ಕೊಲೆ ಮಾಡಿರುವ ಆರೋಪಿಯನ್ನು ದಿನಾಂಕ: 07-05-2025 ರಂದು ಕೊಕೇರಿ ಗ್ರಾಮದ ಪೂಣಚ್ಚಂಡ ಮಾದಪ್ಪ ರವರ ತೋಟದ ಲೈನುಮನೆಯ ನಿವಾಸಿಯಾದ ಪಣಿ ಎರವರ ರಮೇಶ, (49 ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ ಹಾಗೂ ಕೃತ್ಯಕ್ಕೆ ಬಳಸಿದ ಕತ್ತಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!