ಕ್ರೀಡೆ

ಚೆನ್ನೈನಲ್ಲಿ‌ ನಡೆದ‌ ಮ್ಯಾರಥಾನ್: ಕುಶಾಲನಗರದ ನಿತಿನ್ ಕುಮಾರ್ ಗೆ ಕಂಚು

ಕುಶಾಲನಗರ, ಜು 27: ಚೆನೈನ ಬೆಸೆನೆಂಟ್ ನಗರದಲ್ಲಿ ಹಾಕ್ಸ್ವೆರ್ ಡ್ರೀಮ್ ರನ್ನರ್ಸ್ ಕ್ರೀಡಾ ಸಂಸ್ಥೆ ಆಯೋಜಿಸಿದ ಮ್ಯಾರಥಾನ್ ಕ್ರೀಡಾ ಕೂಟದ 10 ಕಿಲೋಮೀಟರ್ ಪುರುಷರ ವಿಭಾಗ ಸ್ಪರ್ಧೆಯಲ್ಲಿ ಕುಶಾಲನಗರದ ನಿತಿನ್ ಕುಮಾರ್ ಕಂಚಿನ ಪದಕವನ್ನು ಗಳಿಸಿದ್ದಾರೆ.
10 ಕಿಮಿ ದೂರವನ್ನು 33.11 ನಿಮಿಷದಲ್ಲಿ ಕ್ರಮಿಸಿದ್ದಾರೆ. 21 ಕಿಲೋ ಮೀಟರ್ ಮತ್ತು 10 ಕಿಲೋ ಮೀಟರ್ ವಿಭಾಗದ ಹಾಫ್ ಮ್ಯಾರಥಾನ್ ಸ್ಪರ್ಧೆಗಳು ನಡೆದು ದೇಶದ ವಿವಿಧ ರಾಜ್ಯಗಳ 5000 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದರು. ತಮಿಳುನಾಡಿನ ಅರೋಗ್ಯ ಸಚಿವ ಸುಬ್ರಹ್ಮಣ್ಯ ಬಹುಮಾನವನ್ನು ವಿತರಣೆ ಮಾಡಿದರು. ನಿತಿನ್ ಕುಮಾರ್ ಗೆ ಪೋಲಿಸ್ ಇಲಾಖೆಯ ಅಂತೋಣಿ ಡಿಸೋಜ ತರಬೇತಿ ನೀಡಿದ್ದಾರೆ.
ನಿತಿನ್ ಕುಮಾರ್ ಕುಶಾಲನಗರ ಕರಿಯಪ್ಪ ಬಡಾವಣೆಯ ಮುರುಗನ್, ಕೆ.ಕೆ.ಮಂಜುಳಾ ದಂಪತಿಗಳ‌ ಪುತ್ರ.

Related Articles

Leave a Reply

Your email address will not be published. Required fields are marked *

Back to top button
error: Content is protected !!