ಶಿಕ್ಷಣ

ಕುಶಾಲನಗರದ ಎಂ.ಎ.ತೇಜಸ್ವಿನಿ ರಾಜ್ಯಕ್ಕೆ 2nd Rank

ಕುಶಾಲನಗರ, ಏ 08: ಮೈಸೂರು ಜಿಲ್ಲೆಯ
ಪಿರಿಯಾಪಟ್ಟಣದ ತಾಲ್ಲೂಕಿನ ಕೊಪ್ಪ ಭಾರತ ಪಿಯು ಕಾಲೇಜಿನ ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ 600 ಅಂಕಗಳಿಗೆ 598 ಅಂಕಗಳನ್ನು ಗಳಿಸುವ ಮೂಲಕ ಕುಶಾಲನಗರದ ವಿದ್ಯಾರ್ಥಿನಿ ಎಂ.ಎ. ತೇಜಸ್ವಿನಿ
ರಾಜ್ಯಕ್ಕೆ 2 ನೇ ರ್‍ಯಾಂಕ್
ಪಡೆದು ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ತೇಜಸ್ವಿನಿ,
ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆಯ ನಿವಾಸಿ ಅರಣ್ಯ ಇಲಾಖೆಯ ಡಿ ಆರ್ ಎಫ್ ಓ
ಎಂ.ಎ.ಆನಂದ ಮತ್ತು ಸುಜಾತ ದಂಪತಿಯ ಪುತ್ರಿಯಾಗಿದ್ದು, ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಹಾಗೂ ಕುಶಾಲನಗರ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ತೇಜಸ್ವಿನಿಯು ಮುಂದೆ ಚಾರ್ಟೆಡ್ ಅಕೌಂಟ್ಸ್ ಕೋರ್ಸ್ ಕಲಿಯುವ ಉದ್ದೇಶ ಹೊಂದಿದ್ದಾರೆ.
ಡಿ.ಆರ್ ಎಫ್ ಓ
ಎಂ.ಎ.ಆನಂದ ಅವರು ಪ್ರಸ್ತುತ ಮಾಕುಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯಕ್ಕೆ 2ನೇ ರ್‍ಯಾಂಕ್ ಗಳಿಸಿದ ಕುರಿತು ಸಂತಸ ವ್ಯಕ್ತಪಡಿಸಿದ ತೇಜಸ್ವಿನಿ, ತಾನು ರ್‍ಯಾಂಕ್ ಪಡೆಯಲು ತನ್ನ ಕಲಿಕೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಹಾಗೂ ತನ್ನ ತಂದೆ – ತಾಯಿಯವರ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕಾರಣವಾಗಿದೆ.
ತಾನು ಮೊದಲಿನಿಂದಲೂ ಪ್ರತಿನಿತ್ಯ ಐದಾರು ಗಂಟೆ ಕಾಲ ಪರಿಶ್ರಮಪಟ್ಟು ಅಭ್ಯಾಸ ಮಾಡುತ್ತಿದೆ. ಪರೀಕ್ಷೆಯ ಪೂರ್ವದಲ್ಲಿ ದಿನಕ್ಕೆ 8-10 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದೆ.
ನನಗೆ ಉತ್ತಮ ಅಂಕಗಳು ಬರುತ್ತವೆ ಎಂದು ವಿಶ್ವಾಸ ಇತ್ತು. ಕಷ್ಟಪಟ್ಟು ಉತ್ತಮ ಅಭ್ಯಾಸ ಮಾಡಿದರೆ ಯಶಸ್ಸು ಲಭಿಸುತ್ತದೆ ಎಂಬ ವಿಶ್ವಾಸ ಇತ್ತು. ಮುಂದೆ ತಾನು ಸಿ.ಎ.ಕೋರ್ಸ್ ಅಭ್ಯಾಸ ಮಾಡುವ ಉದ್ದೇಶ ಹೊಂದಿದ್ದು, ನಮ್ಮ ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತು ದೇಶದ ಆರ್ಥಿಕ ಮಟ್ಟವನ್ನು ಸುಧಾರಿಸುವ ದಿಸೆಯನ್ನು ತಾನು ಹೊಂದಿರುವುದಾಗಿ ತೇಜಸ್ವಿನಿ ತಿಳಿಸಿದ್ದಾರೆ.
ಎಲ್ಲಾ ವಿಷಯಗಳಲ್ಲಿ ತಲಾ 100 ಅಂಕ ಗಳಿಸಿದ ತೇಜಸ್ವಿನಿ ಇಂಗ್ಲಿಷ್ ನಲ್ಲಿ 98 ಅಂಕಗಳಿಸಿ 600 ಕ್ಕೆ 598 ಅಂಕ ಗಳಿಸಿದ್ದಾರೆ.
08 ಕೆಯುಎಸ್ 05 ಚಿತ್ರದಲ್ಲಿ ರಾಜ್ಯಕ್ಕೆ ಎರಡನೇ ರಾಂಕ್ ಗಳಿಸಿದ ತೇಜಸ್ವಿನಿಗೆ ತಾಯಿ ಸಿಹಿ ತಿನಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!