ದೇವಾಲಯ

ಶಿರಂಗಾಲ ಶ್ರೀ ಉಮಾಮಹೇಶ್ವರ ಸ್ವಾಮಿ ತೆಪ್ಪೋತ್ಸವ.

ಕುಶಾಲನಗರ.ಮಾ. 20 : ಶಿರಂಗಾಲ ಗ್ರಾಮ ದೇವತಾ ಸಮಿತಿಯ ವತಿಯಿಂದ ನಡೆದ ಶ್ರೀ ಮಂಟಿಗಮ್ಮ ನವರ ಉತ್ಸವ ಮತ್ತು ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವದ ತೆಪ್ಪೋತ್ಸವ ಕಾರ್ಯಕ್ರಮವು ಶ್ರಧ್ಧಾಭಕ್ತಿಯಿಂದ ನೆರವೇರಿತು.

ತೆಪ್ಪೋತ್ಸವದ ಅಂಗವಾಗಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಶ್ರೀ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಅರ್ಚಕರಾದ ಗಣೇಶ್ ತಂಡದವರಿಂದ ನೆರವೇರಿತು.
ನಂತರ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಶ್ರೀ ಉಮಾಮಹೇಶ್ವರ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ  ಮೂಡಲಕೊಪ್ಪಲು, ನಲ್ಲೂರು, ಸಾಲುಕೊಪ್ಪಲು, ಶಿರಂಗಾಲ ಗೇಟ್ , ಮಣಜೂರು ಗ್ರಾಮದಲ್ಲಿ ಮೆರವಣಿಗೆ ಸಾಗಿ ಬಂದ ನಂತರ ಪವಿತ್ರ ಕಾವೇರಿ ನದಿಯಲ್ಲಿ ಶ್ರೀ ಸ್ವಾಮಿಗೆ ಗಂಗಾ ಸ್ನಾನ ಮೂಲಕ ತೆಪ್ಪೋತ್ಸವ ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಸ್. ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಎಸ್. ಜೆ. ಉಮೇಶ್, ಕಾರ್ಯದರ್ಶಿ ಎಂ. ಎಸ್. ಗಣೇಶ್, ಕಟ್ಟಡ ಸಮಿತಿ ಗೌರವ ಅಧ್ಯಕ್ಷ ಎಸ್. ಆರ್. ಕಾಳಿಂಗಪ್ಪ, ಅಧ್ಯಕ್ಷ ಎಸ್. ಕೆ. ಪ್ರಸನ್ನ, ಕಾರ್ಯದರ್ಶಿ ಬಿ‌.ಎಸ್. ಬಸವಣ್ಣಯ್ಯ, ಸಮಿತಿಯ ಸದಸ್ಯರುಗಳಾದ ಎಸ್. ಎ. ಶ್ರೀನಿವಾಸ್, ಸಿ.ಎನ್. ಲೋಕೇಶ್, ಎಸ್. ಪಿ.ಚೇತನ್, ಎಸ್. ವಿ. ಧನೇಂದ್ರ ಕುಮಾರ್, ಎಸ್. ಎ. ಯೋಗೇಶ್ ಸೇರಿದಂತೆ ಸಮಿತಿಯ ನಿರ್ದೇಶಕರು ಗ್ರಾಮಸ್ಥರು, ಸಾರ್ವಜನಿಕರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!