ಅಪಘಾತ

ಪಿಕ್ ಅಪ್ ಪಲ್ಟಿ: ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗಾಯ

ಕುಶಾಲನಗರ, ಮಾ 16: ಅರಣ್ಯ ಇಲಾಖೆಗೆ ಸೇರಿದ‌ ಪಿಲ್ ಅಪ್ ವಾಹನ ಪಲ್ಟಿಯಾಗಿ ಅದರಲ್ಲಿದ್ದ 10 ಮಂದಿ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡ ಘಟನೆ ಯಡವನಾಡು‌ ಬಳಿ ನಡೆದಿದೆ.
ಸೋಮವಾರಪೇಟೆ ವಲಯದ ಹುದುಗೂರು ವಿಭಾಗಕ್ಕೆ ಸೇರಿದ ಯಡನವಾಡು ಮೀಸಲು ಅರಣ್ಯಕ್ಕೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗಳನ್ನು ಮಧ್ಯಾಹ್ನ ಊಟಕ್ಕೆಂದು ಅರಣ್ಯದಿಂದ ಕರೆತರುವ ಸಂದರ್ಭ ಹುದುಗೂರು ಯಡನವಾಡು ಮಧ್ಯ ಭಾಗದ ಬಸವೇಶ್ವರ ದೇವಾಲಯದ ಬಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ. ಘಟನೆಯಲ್ಲಿ
ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಸೇರಿದಂತೆ ಸಿಬ್ಬಂದಿಗಳಾದ ವೆಂಕಟೇಶ್, ಸಚಿನ್, ವಿನು, ಸತೀಶ್, ಜೀವನ್, ಗಣೇಶ್, ಸುರೇಶ್, ಶ್ರೀಕಾಂತ್, ಹರೀಶ್ ಗಾಯಗೊಂಡವರು. ಗಾಯಾಳುಗಳನ್ನು ಕುಶಾಲನಗರದ ಸಮುದಾಯದ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ, ಬಾಣವಾರ, ಮತ್ತು ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!