ಸಭೆ

ಹೆಬ್ಬಾಲೆ ಹೋಬಳಿ ಕಸಾಪ ಘಟಕ‌ ರಚನೆ: ಪದಗ್ರಗಣ ಸಮಾರಂಭ

ಕುಶಾಲನಗರ ಜು 25:
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೊದಲ ಬಾರಿಗೆ ರಚಿಸುತ್ತಿರುವ ಹೆಬ್ಬಾಲೆ ಹೋಬಳಿ ಕಸಾಪ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹೋಬಳಿ ಕಸಾಪ ಘಟಕದ ನೂತನ ಅಧ್ಯಕ್ಷ ಎಂ.ಎನ್.ಮೂರ್ತಿ ಮತ್ತು ಗೌರವ ಕಾರ್ಯದರ್ಶಿಯಾಗಿ ಎಚ್.ಎನ್.ಸುಬ್ರಹ್ಮಣ್ಯ , ಕವಿತಾ ಪುಟ್ಟರಾಜು ಮತ್ತು ಕೋಶಾಧಿಕಾರಿಯಾಗಿ ಎಸ್.ಎಸ್.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳಿಗೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭ ಮಾತನಾಡಿದ ಟಿ.ಪಿ.ರಮೇಶ್, ಹೆಬ್ಬಾಲೆ ಅತಿದೊಡ್ಡ ಗ್ರಾಮ ಹಾಗೂ ಹೆಚ್ಚಿನ ಶಿಕ್ಷಕರನ್ನು ಹೊಂದಿರುವ ಗ್ರಾಮ ಎಂಬ ಹೆಮ್ಮೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಕಸಾಪ ಚಟುವಟಿಕೆಗಳನ್ನು ಪಸರಿಸಬೇಕು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಗ್ರಾ.ಪಂ.ಮಟ್ಟದಲ್ಲೂ ಕಸಾಪ ಘಟಕಗಳು ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ. ಹುಟ್ಟುವಾಗಲೇ ಯಾರು ಸಾಹಿತಿಗಳಾಗಲಿ, ಬರಹಗಾರರಾಗಿರುವುದಿಲ್ಲ.ವಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಂಡು ವಿಶೇಷ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಾಹಿತ್ಯ ಬಳಗ ಸ್ಥಾಪನೆಗೆ ಚಿಂತನೆ ಮಾಡಲಾಗಿದ್ದು,ಈ ಕುರಿತು ಡಿಡಿಪಿಐ ಅವರಿಗೆ ಪತ್ರ ಬರೆದು ಮನವಿ‌ ಮಾಡಲಾಗುವುದು ಎಂದರು.
ನಿವೃತ್ತ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ಉಚಿತವಾಗಿ ಕಸಾಪ ಸದಸ್ಯತ್ವ ನೀಡಲು ಕೇಂದ್ರ ಸಮಿತಿ ತೀರ್ಮಾನಿಸಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಜಿಲ್ಲೆಯಲ್ಲಿ 16 ನೂತನ ಹೋಬಳಿ ಘಟಕ ಆರಂಭಿಸಲಾಗುತ್ತಿದೆ.‌ಕಸಾಪದಲ್ಲಿ ಕೆಲಸ‌ ಮಾಡುವುದು ಗೌರವ ಹಾಗೂ ಹೆಮ್ಮೆ ವಿಚಾರವಾಗಿದೆ. ಎಲ್ಲ ಕನ್ನಡ ಅಭಿಮಾನಿಗಳು ಕಸಾಪ ಸದಸ್ಯರಾಗಬಹುದು. ಕಸಾಪ ಅಧಿಕಾರ ವಿಕೇಂದ್ರೀಕರಣದ ನಿಯಮದಡಿ ಹೋಬಳಿ ಘಟಕಗಳನ್ನು ರಚನೆ ಮಾಡಲಾಗುತ್ತಿದೆ. ಕಸಾಪ
ಗುರಿ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು,ನುಡಿ,ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಮೂಲಕ ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಾಗಿದೆ. ಸಾಹಿತ್ಯದ ಬಗ್ಗೆ ಒಲವು ಮೂಡಿಸುವಂತ ಕಾರ್ಯಕ್ರಮ ಆಯೋಜನೆ,ದತ್ತಿನಿದಿ ಸ್ಥಾಪನೆಗೆ ಆದ್ಯತೆ ನೀಡಬೇಕು.ಇದರಿಂದ ಸಕಾಪ ಕಾರ್ಯಕ್ರಮ ನಡೆಸಲು ಸಹಕಾರವಾಗುತ್ತದೆ. ದತ್ತಿನಿದಿ 200 ಕ್ಕೆ ಏರಿಸಲು ಕ್ರಮವಹಿಸಲು ಮನವಿ ಮಾಡಿದ ಕಾಮತ್ ಅವರು.ಕಸಾಪ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಲು ಪದಾಧಿಕಾರಿಗಳು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕಸಾಪ ಸದಸ್ಯ ಜಿ.ಎಲ್.ರಾಮಪ್ಪ ಮಾತನಾಡಿ, ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕು.ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಸಾಪ ಸದಸ್ಯತ್ವವನ್ನು ಹೊಂದುವ ಮೂಲಕ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್.ಮಂಜುನಾಥ್,ಉಪಾಧ್ಯಕ್ಷೆ ಅರುಣ್ ಕುಮಾರಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ, ಶಾಲಾ ಆಡಳಿತ ಮಂಡಳಿ ಮಾಜಿ ನಿರ್ದೇಶಕರಾದ ಎಚ್.ಎಚ್.ರಾಜಶೇಖರ್, ಎಚ್.ಸಿ.ಹರೀಶ್,ಮುಖಂಡರಾದ ಟಿ.ಬಿ.ಜಗದೀಶ್, ಕಾಲೇಜಿನ ಪ್ರಾಂಶುಪಾಲ ಎನ್.ಎನ್.ಧರ್ಮಪ್ಪ,ಮುಖ್ಯ ಶಿಕ್ಷಕ ಬಸವರಾಜು ಶೆಟ್ಟಿ,ಹೋಬಳಿ ನಿಕಟಪೂರ್ವ ಅಧ್ಯಕ್ಷ ಟಿ.ಕೆ.ಪಾಂಡುರಂಗ,ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜು, ರಾಜಣ್ಣ, ತಾಲ್ಲೂಕು ಘಟಕದ ಕೋಶಾಧಿಕಾರಿ ಉಮೇಶ್,ಜಿಲ್ಲಾ ಕಸಾಪ ನಿರ್ದೇಶಕ ವೆಂಕಟನಾಯಕ್,ತಾಲ್ಲೂಕು ನಿರ್ದೇಶಕ ಕಾಳಪ್ಪ,ನಿವೃತ್ತ ಶಿಕ್ಷಕಿ ಜಯಂತಿ ಹಾಗೂ ಗ್ರಾ.ಪಂ.ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಕವಿತಾ ನಿರೂಪಿಸಿದರು.ಲೋಕೇಶ್ ಸ್ವಾಗತಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!