ಕುಶಾಲನಗರ, ಸೆ 28: ವಿಶ್ವ ರೇಬಿಸ್ ಡೇ ಅಂಗವಾಗಿ ಟಿಬೇಟಿಯನ್ ಕ್ಯಾಂಪ್ ನ ಡೋಲ್ಮಾ ಡಾಗ್ ರೆಸ್ಕ್ಯೂ ಸೆಂಟರ್ ಆಶ್ರಯದಲ್ಲಿ ಆಂಟಿ ಉಚಿತ ವ್ಯಾಕ್ಸಿನೇಷನ್ ಶಿಬಿರ ಆಯೋಜಿಸಲಾಗಿತ್ತು.
ಓಲ್ಡ್ ಕ್ಯಾಂಪ್ ನಂಬರ್ ಒಂದರಲ್ಲಿನ ಲುಗ್ಸಮ್ ನ್ಯಾಮದೆಲ್ ಕಮ್ಯುನಿಟಿ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಟಿಬೇಟಿಯನ್ ವಸಾಹತು ಸೇರಿದಂತೆ ನೆರೆಯ ಗ್ರಾಮಗಳ ಸಾಕು ನಾಯಿಗಳೊಂದಿಗೆ ಬೀದಿ ನಾಯಿಗಳಿಗೂ ಕೂಡ ಉಚಿತವಾಗಿ ವಾಕ್ಸಿನೇಷನ್ ಮಾಡಲಾಯಿತು.
ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಅಜಯ್ ಗೌಡ, ಶಿಬಿರದ ಕುರಿತು ಮಾತನಾಡಿದರು. ಮಾರಕ ರೇಬಿಸ್ ಬಗ್ಗೆ ಎಲ್ಲರೂ ಜಾಗೃತ ವಹಿಸಬೇಕಿದೆ. ಶ್ವಾನ ಸಾಕುವವರು ಕೂಡ ಎಚ್ಚರ ವಹಿಸಿ ನಾಯಿಗಳಿಗೆ ಲಸಿಕೆ ಕೊಡಿಸಬೇಕಿದೆ ಎಂದು ಕರೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದ
ಪಶುವೈದ್ಯ ಕೇಂದ್ರದ ಪಶುವೈದ್ಯ ಡಾ.ಮಧುಸೂದನ್ ಶಿಬಿರದಲ್ಲಿ ಪಾಲ್ಗೊಂಡು ರೇಬಿಸ್ ನ ದುಷ್ಪರಿಣಾಮ, ನಿಯಂತ್ರಣ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮ ಆಯೋಜಕ ಕಲ್ಸಂಗ್ ದೋರ್ಜೆ ಶಿಬಿರದ ಕುರಿತು ಮಾಹಿತಿ ನೀಡಿದರು. ಕಳೆದ 6 ವರ್ಷಗಳಿಂದ ನಿರಂತರವಾಗಿ ಉಚಿತ ವಾಕ್ಸಿನೇಷನ್ ಶಿಬಿರ ಹಮ್ಮಿಕೊಂಡು ಬರಲಾಗುತ್ತಿದೆ. ದಾನಿಗಳ ನೆರವಿನಿಂದ ಇಂತಹ ಶಿಬಿರ ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಟಿಬೇಟಿಯನ್ ಎಸ್.ಒ.ಎಸ್, ಟಿಸಿವಿ ಕೇಂದ್ರದ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Back to top button
error: Content is protected !!