ಕುಶಾಲನಗರ, ಜು 18: ಕಲ್ಲು ಕ್ವಾರಿಯ ನೀರಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೂಲಿ ಕಾರ್ಮಿಕ (55) ಚಂದ್ರು ಎಂಬಾತ ಮೃತ ವ್ಯಕ್ತಿ.
ಭಾನುವಾರ ಮಧ್ಯಾಹ್ನ ಚಂದ್ರು ಧರಿಸಿದ್ದ ಪಂಚರ, ಜರ್ಕಿನ್ ಗ್ರಾಮದ ಕುಪ್ಪ ಕ್ವಾರಿ ಬಳಿ ಪತ್ತೆಯಾಗಿದೆ. ಆದರೆ ಯಾರಿಗೂ ಕೂಡ ಈತನ ಆತ್ಮಹತ್ಯೆ ಮಾಡಿಕೊಂಡಿದ್ದ ಬಗ್ಗೆ ವಿಶ್ವಾಸವಿರಲಿಲ್ಲ. ಆದರೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸಂಜೆ ತನಕ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಸೋಮವಾರ ದುಬಾರೆ ರಾಫ್ಟಿಂಗ್ ಸಿಬ್ಬಂದಿಗಳು ರಾಫ್ಟರ್ ಬೋಟ್ ಬಳಿ ಹುಡುಕಾಟ ನಡೆಸಿದಾಗ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.
ಇತ್ತೀಚೆಗಷ್ಟೆ ಚಂದ್ರು ಅವರ ಪತ್ಮಿ ಮೃತಪಟ್ಟಿದ್ದು ಈ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದರು.
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Back to top button
error: Content is protected !!