ಮಡಿಕೇರಿ, ಆ 30:ಕೊಡಗು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಚುನಾವಣಾ ಕಾವು ರಂಗೇರುತ್ತಿದೆ. ಮತ್ತೊಂದೆಡೆ ಚುನಾವಣಾ ಪ್ರಚಾರ ಕೂಡ ಅಬ್ಬರದಿಂದ ಸಾಗುತ್ತಿದೆ.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ಮೊಹಮ್ಮದ್ ಹರ್ಷದ್ ಸುಂಟ್ಟಿಕೊಪ್ಪ ಅವರ ಪರವಾಗಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಮತಯಾಚನೆ ನಡೆಸಿದ್ದಾರೆ.
ಇದೀಗ ಪ್ರತಿನಿತ್ಯ ವಿವಿಧ ಕಾಲೇಜುಗಳಲ್ಲಿ ಮೊಹಮ್ಮದ್ ಹರ್ಷದ್ ಅವರಿಗೆ ಯುವಕ-ಯುವತಿಯರು ಮತ ಚಲಾಯಿಸುತ್ತಿದ್ದಾರೆ.
ಕೊಡಗಿನಲ್ಲಿ ದಿನದಿಂದ ದಿನಕ್ಕೆ ಮೊಹಮ್ಮದ್ ಹರ್ಷದ್ ಪರವಾಗಿ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ.ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ
ಐವರು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು,ಮೊಹಮ್ಮದ್ ಹರ್ಷದ್ ಅವರ ಪರವಾಗಿ ಹೆಚ್ಚಿನ ಒಲವು ಕಂಡುಬರುತ್ತಿದ್ದು, ಹರ್ಷದ್ ಗೆಲುವು ಖಚಿತಗೊಂಡಿದ್ದು,ಇನ್ನೂಳಿದ ನಾಲ್ವರು ಅಭ್ಯರ್ಥಿಗಳು ದ್ವಿತೀಯ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ.
Back to top button
error: Content is protected !!