ಕುಶಾಲನಗರ, ಆ 23: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೇರಂದಾಣೆ ಗ್ರಾಮದ ನಿವಾಸಿಯಾದ ಗೋಪಾಲಕೃಷ್ಣ.ಕೆ.ಕೆ ಎಂಬುವವರ ಮನೆಗೆ ದಿನಾಂಕ: 22-08-2024 ರಂದು ಬೆಳಿಗ್ಗೆ ಸುಮಾರು 11.30 ಗಂಟೆ ಸಮಯದಲ್ಲಿ ಮನೆಯಲ್ಲಿ ಗೋಪಾಲಕೃಷ್ಣಕೆ.ಕೆ ರವರ ತಾಯಿ ಒಬ್ಬರೆ ಇರುವ ಸಂದರ್ಭ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನಾದ ಸರ ಹಾಗೂ ಮನೆಯ ಬೀರುನಲ್ಲಿದ್ದ ಚಿನಾಭರಣಗಳನ್ನು ದರೋಡೆ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕಲಂ: 309(6) ಬಿಎನ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ಘಟನೆ ಸ್ಥಳಕ್ಕೆ ಹಿರಿಯ ಅಧಿಕಾರಿ/ಸಿಬ್ಬಂದಿಯವರುಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ಆರೋಪಿಗಳನ್ನು ಪತ್ತೆ ಹಚ್ಚಲು ಮಹೇಶ್ ಕುಮಾರ್, ಡಿ.ಎಸ್.ಪಿ ಮಡಿಕೇರಿ ಉಪವಿಭಾಗ, ಅನೂಪ್ ಮಾದಪ್ಪ, ಪಿ.ಐ. ಮಡಿಕೇರಿ ಗ್ರಾಮಾಂತರ ವೃತ್ತ, ಶೋಭಾ ಲಮಾಣಿ, ಪಿ.ಎಸ್.ಐ ಭಾಗಮಂಡಲ ಪೊಲೀಸ್ ಠಾಣೆ & ಮಂಜುನಾಥ.ಈ, ಪಿಎಸ್‌ಐ, ನಾಪೋಕ್ಲು ಪೊಲೀಸ್ ಠಾಣೆ ಹಾಗೂ ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಯನ್ನು ಶೋಭಾ ಲಮಾಣಿ. ಪಿ.ಎಸ್.ಐ ಭಾಗಮಂಡಲ ಪೊಲೀಸ್ ಠಾಣೆ ರವರು ದಿನಾಂಕ: 22-08-2024 ರಂದು ಸಂಜೆ 05 ಗಂಟೆಗೆ ಸಣ್ಣಪುಲಿಕೋಟು ಬಸ್ ನಿಲ್ದಾಣದ ಬಳಿ ಚೇರಂಬಾಣೆ ನಿವಾಸಿಯಾದ ಸುದರ್ಶನ್, 24 ವರ್ಷ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ಕಳವು ಮಾಡಿದ್ದ 60 ಗ್ರಾಂ 530 ಮಿಲಿ ಚಿನ್ನಾಭರಣಗಳನ್ನು & ರೂ. 620 ನಗದು ಹಾಗೂ ಕೃತ್ಯಕ್ಕೆ ಬಳಸಿದ ಡ್ರಾಗರ್ (ಚಾಕು)ವನ್ನು ವಶಪಡಿಸಿಕೊಳ್ಳಲಾಗಿದೆ.
Back to top button
error: Content is protected !!