ಕುಶಾಲನಗರ, ಆ. 19: ಚಿಕ್ಕ ಅಳುವಾರ ಗ್ರಾಮದಲ್ಲಿ ಶ್ರೀ ರಾಮಲಿಂಗ ಬನಶಂಕರಿ ದೇವಾಂಗ ಸಮಿತಿಯ ವತಿಯಿಂದ ಶ್ರಾವಣ ಮಾಸದ ನೂಲ ಹುಣ್ಣಿಮೆ ದಿನದಂದು ಚಿಕ್ಕ ಅಳುವಾರ ಗ್ರಾಮದಲ್ಲಿ ದೇವಾಂಗ ಸಮುದಾಯದವರು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನೂಲು ಹುಣ್ಣಿಮೆ ಆಚರಣೆಯನ್ನು ನಡೆಸಿದರು.
ಗ್ರಾಮದ ಪ್ರಮುಖ ಕೆರೆಯಲ್ಲಿ ಪ್ರಥಮವಾಗಿ ಗಂಗಾ ಪೂಜೆ ಸಲ್ಲಿಸಿ, ನಂತರ ಕಳಸವನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಅಳುವಾರದಮ್ಮ ದೇವಾಲಯದ ಆವರಣವನ್ನು ತಲುಪಿ, ನಂತರ ವಿಶೇಷ ಪೂಜೆ ಹೋಮ ಹವನಗಳ ನಂತರ ಸಾಮೂಹಿಕವಾಗಿ ನೂಲು ಧಾರಣೆ ( ಜನಿವಾರ ಧರಿಸುವ) ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಡಿ.ಆರ್. ಪ್ರೇಮಕುಮಾರ್, ಕಾರ್ಯದರ್ಶಿ ಎ. ಪಿ. ಸುನಿಲ್, ಖಜಾಂಜಿ ಲೋಕೇಶ್ ಸೇರಿದಂತೆ ಗ್ರಾಮದ ನೂರಾರು ದೇವಾಂಗ ಕುಲಭಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Back to top button
error: Content is protected !!