ಆರೋಪ

ಘನ ವಾಹನ ಚಾಲನೆಯಿಂದ ಹದಗೆಟ್ಟ ರಸ್ತೆ, ಸಾರ್ವಜನಿಕರ ದೂರು

ಸೋಮವಾರಪೇಟೆ ಏ 20:ಸೀಮೆಂಟ್ ತುಂಬಿದ ಭಾರಿ ಲಾರಿಯೊಂದು ಚಲಿಸಿ ರಸ್ತೆ ಜಖಂಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಆಂಧ್ರಪ್ರದೇಶಕ್ಕೆ ಸೇರಿದ AP 39 VF 5166 ಸಂಖ್ಯೆಯ ಸಿಮೆಂಟ್ ತುಂಬಿದ ಲಾರಿ ಪಟ್ಟಣದ ಶನಿವಾರಸಂತೆ ರಸ್ತೆಯಲ್ಲಿರುವ ಶಿವಕುಮಾರ ಸ್ವಾಮೀಜಿ ಬಸ್ಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ನಿಲ್ಲಿಸಿದ ಪರಿಣಾಮ ಬಸ್ಸ್ ನಿಲ್ದಾಣದ ಮುಂಬಾಗ ಅಳವಡಿಸಿದ್ದ ಇಂಟರ್ ಲಾಕ್ ಗಳು ಹೊಡೆದು ಹೋಗಿದ್ದು ರಸ್ತೆ ಕುಸಿತವಾಗಿ ಜಖಂ ಗೊಂಡಿದೆ.
ಸ್ಥಳೀಯ ಗುತ್ತಿಗೆದಾರ ಬಷೀರ್ ಎಂಬುವರಿಗೆ 40ಟನ್ ಸಿಮೆಂಟ್ ಸರಬರಾಜು ಮಾಡಲು ಬಂದಿದ್ದ ಲಾರಿ ಎನ್ನಲಾಗಿದೆ. ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!