ಚುನಾವಣೆ

ವಯೋವೃದ್ದರು, ವಿಶೇಷ ಚೇತನರಿಂದ ಮತದಾನ

ಕುಶಾಲನಗರ ಏ 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 85 ವಯೋಮಿತಿಯ ಮತ್ತು ವಿಶೇಷ ಚೇತನರಿಗೆ ಕೇಂದ್ರದ ಚುನಾವಣಾ ಆಯೋಗದ ಸೂಚನೆಯಂತೆ ಮತ್ತು ಜಿಲ್ಲಾಧಿಕಾರಿಗಳ ಅದೇಶದ್ವಯ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 14 ಮಂದಿ ಮತದಾನ ಮಾಡಿದರು. ಚುನಾವಣಾ ನಿಯಮಾನುಸಾರವಾಗಿ ಮತದಾನದ ಕೇಂದ್ರ ವ್ಯಾಪ್ತಿಗೆ ನೇಮಕಗೊಂಡ ಅಧಿಕಾರಿಗಳ ತಂಡವು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಇರುವವರ ಪಟ್ಟಿಯ ಅಧಾರದ ಮೇಲೆ ಅವರವರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಕೈಗೊಂಡರು.

ಈ ಸಂದರ್ಭ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೆಕ್ಟರ್ ಅಧಿಕಾರಿ ಇ. ಪುಟ್ಟಸ್ವಾಮಿ ಸೇರಿದಂತೆ ಚುನಾವಣಾ ವಿಭಾಗದ ಅಧಿಕಾರಿ, ಪೋಲೀಸ್ ಸಿಬ್ಬಂದಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!