ಕುಶಾಲನಗರ, ಮಾ 30: ಸಹೋದರನಿಂದಲೇ ತಮ್ಮನಿಗೆ ಗುಂಡು ಹೊಡೆದು ಕೊಲೆ ಮಾಡಿದ ಪ್ರಕರಣ ಪೊನ್ನಂಪೇಟೆ ತಾಲೂಕು ಬೇಗೂರಿನಲ್ಲಿ ಇದೀಗ ನಡೆದಿದೆ.
ಕಾಂಗ್ರೆಸ್ ಪಕ್ಷದ ಮುಖಂಡ ಅರ್ವತೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಂಡ ಪ್ರಕಾಶ್,( 57) ಎಂಬವರಿಗೆ ಅವರ ಸಹೋದರ ಸುಬ್ರಮಣಿ ಇದೀಗ ಬೇಗೂರು ತೋಟದಲ್ಲಿ ಗುಂಡು ಹೊಡೆದ ಪರಿಣಾಮ ಪ್ರಕಾಶ್ ಮೃತಪಟ್ಟಿದ್ದಾರೆ. ಪ್ರಕಾಶ್ ಪುತ್ರ ಧ್ಯಾನ್ ಗೆ ಗುಂಡು ತಗಲಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದಾರೆ.
Back to top button
error: Content is protected !!