ಆರೋಪ

ಪಕ್ಷದ ಸದಸ್ಯತ್ವ ಪಡೆಯದವರಿಗೆ ಮಣೆ ಏಕೆ, ಪ್ರತಾಪ್ ಸಿಂಹ ವಿರುದ್ದ ಕುತಂತ್ರಕ್ಕೆ ಆಕ್ರೋಷ

ಕುಶಾಲನಗರ, ಮಾ 13: ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ‌ ಆಯ್ಕೆ ಬಯಸಿ‌ ಕೊಡಗು-ಮೈಸೂರು ಕ್ಷೇತ್ರದದ ಸ್ಪರ್ಧಿಸಲು ಮುಂದಾಗಿದ್ದು, ಅವರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡುವಂತೆ ಒತ್ತಾಯ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೂಡುಮಂಗಳೂರು ಗ್ರಾಮದ ಕೆ.ಡಿ.ಪ್ರಶಾಂತ್,ನಾನೇನು ಸಂಸದರಾದ ಪ್ರತಾಪ್ ಸಿಂಹ ರವರ ಜನಾಂಗದವನಲ್ಲಾ,ನಾನೇನು,ಸಂಸದರಾದ ಪ್ರತಾಪ್ ಸಿಂಹ ರವರ, ಅಭಿಮಾನಿಯೂ ಅಲ್ಲಾ, ನಾನೇನು ಸಂಸದರಾದ ಪ್ರತಾಪ್ ಸಿಂಹ ರವರ ಫಲಾನುಭವಿಯಲ್ಲಾ,ನಾನೇನು ಬಿಜೆಪಿ ಪದಾಧಿಕಾರಿಯಲ್ಲಾ ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಹಿಂದುತ್ವದ ಪ್ರತಿಪಾದಕ,ನೇರ ನುಡಿಯ ಅರಿತ ಮಾತಿನ ವಾಗ್ಮಿ, ರಾಷ್ಟ್ರೀಯತೆಯ ಬಗ್ಗೆ ಕ್ರಾಂತಿಕಾರಿ ಬರವಣೆಗೆ ಮೂಲಕ ಯುವ ಸಮುದಾಯವನ್ನು ಬಡಿದೆಬ್ಬಿಸಿದ ನುರಿತ ಲೇಖಕ,ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಂತಹ ಧೀಮಂತ ಯುವ ನಾಯಕರಾದ ಪ್ರತಾಪ್ ಸಿಂಹ ರವರಿಗೆ ಲೋಕಸಭೆಗೆ ಅವಕಾಶ ನೀಡದೆ ಕುತಂತ್ರ ರಾಜಕೀಯಕ್ಕೆ ಪ್ರತಾಪ್ ಸಿಂಹ ರವರನ್ನು ಬಲಿಪಶು ಮಾಡುವುದು ಸರಿಯಲ್ಲಾ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಸದಸ್ಯತ್ವವನ್ನೆ ಪಡೆಯದವರನ್ನು ಕರೆತಂದು ಸೀಟ್ ನೀಡುವ ಸ್ಥಿತಿ ಕೊಡಗು ಮೈಸೂರು ಕ್ಷೇತ್ರಕ್ಕೆ ಬಂದಿದೆಯೇ ?

ಧರ್ಮ ಮತ್ತು ಪಾರ್ಟಿಯ ಪರ ನಿರಂತರವಾಗಿ ಸಮರ್ಥಿಸುತ್ತಾ ಬಂದ ಪ್ರತಾಪ್ ಸಿಂಹ ನವರಿಗೆ ಬಿಜೆಪಿ ನೀಡಿದ ಕೊಡುಗೆ ಇದೇ ನಾ, ಇಂತಹ ಕುತಂತ್ರದಿಂದ ಪಾರ್ಟಿಯ ಸಾಮಾನ್ಯ ಕಾರ್ಯಕರ್ತನ ಮನಸ್ಥಿತಿ ಏನಾಗಬಹುದು ಎಂದು‌ ಅವರು ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!