ಟ್ರೆಂಡಿಂಗ್

ತಾಯಿ ಅಂತ್ಯಕ್ರಿಯೆ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಅಪಘಾತ: ದಂಪತಿ ದುರ್ಮರಣ

ಹುಣಸೂರು, ಮಾ.01:
ಬೈಕ್ ಕ್ಯಾಂಟರ್ ನಡುವಿನ ಮುಖಾಮುಖಿ ಡಿಕ್ಕಿ ಸಂಭವಿಸಿ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ತೀವ್ರಗಾಯಗೊಂಡಿದ್ದ ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ಕನಕ ಭವನದ ಎದುರಿನ ಹೆದ್ದಾರಿಯಲ್ಲಿ ನಡೆದಿದೆ.

ನಗರದ ಮಂಜುನಾಥ ಬಡಾವಣೆಯ ನಿವಾಸಿ ನಿವೃತ್ತ ಪೋಸ್ಟ್ ಮ್ಯಾನ್ ದಂಪತಿ ರಾಜು(64). ಇವರ ಪತ್ನಿ ಸುನಂದ(55) ಸಾವನ್ನಪ್ಪಿದವರು. ಮೃತರಿಗೆ ಒರ್ವ ಪುತ್ರ ಇದ್ದಾರೆ.

ವಿವರ:
ಮೂಲತಃ ತಾಲೂಕಿನ ಬನ್ನಿಕುಪ್ಪೆ ನಿವಾಸಿ. ನಿವೃತ್ತ ಪೋಸ್ಟ್ ಮ್ಯಾನ್ ರಾಜು ತಮ್ಮ ತಾಯಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿ ಅಂತ್ಯಕ್ರಿಯೆಯಲ್ಲಿ ಬಾಗವಹಿಸಿ ನಗರಕ್ಕೆ ಮದ್ಯಾಹ್ನ ವಾಪಸ್ ಆಗುತ್ತಿದ್ದ ವೇಳೆ ಹುಣಸೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಗೂಡ್ಸ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತಲೆ.ಮುಖಕ್ಕೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಇವರ ಪತ್ನಿ ತೀವ್ರಗಾಯಗೊಂಡಿದ್ದ ಸುನಂದ ರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೆ ಸಾವನ್ನಪ್ಪಿದ್ದರು.
ಅಪಘಾತ ನಡೆಸಿದ ಕ್ಯಾಂಟರ್ ಚಾಲಕ ವಾಹನವನ್ನು ನಿಲ್ಲಿಸದೆ ಮೈಸೂರು ಕಡೆಗೆ ಪರಾರಿಯಾಗುತ್ತಿದ್ದ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಬೆನ್ನಟ್ಟಿ ಬಿಳಿಕೆರೆ ಬಳಿ ತಡೆಗಟ್ಟಿ ಬಿಳಿಕೆರೆ ಪೋಲೀಸರ ವಶಕ್ಕೊಪ್ಪಿಸಿದ್ದಾರೆ.
ರಾಜು ಪುತ್ರ ಕಳೆದ ಹಿರಿಯ ಪುತ್ರ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಮಂಜುನಾಥ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡಿದ್ದ ರಾಜು ದಂಪತಿ ಕಿರಿಯ ಪುತ್ರನೊಂದಿಗೆ ನಿವೃತ್ತಿ ಜೀವನ ನಡೆಸುತ್ತಿದ್ದರು.
ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ವಿಷಯ ತಿಳಿದ
ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಶವಾಗಾರಕ್ಕೆ ಸಾಗಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!