ಕಾರ್ಯಕ್ರಮ

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಕುಶಾಲನಗರ, ಫೆ 03 : ವಿದ್ಯಾರ್ಥಿ ಜೀವನವನ್ನು ಶ್ರಮ ಹಾಗೂ ಶ್ರದ್ಧೆಯಿಂದ ಒಯ್ಯುವ ವಿದ್ಯಾರ್ಥಿಗಳ ಬದುಕು ಸಾರ್ಥಕ ವಾಗುತ್ತದೆ. ಅದನ್ನು ಬಿಟ್ಟು ಮೋಜು ಮಸ್ತಿನಿಂದ ಕಳೆದಲ್ಲಿ ನೋವನ್ನು ಅನುಭವಿಸಬೇಕಾಗುತ್ತದೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ವೇಣೂರು ಅನೀಶ್ ಕರೆಕೊಟ್ಟರು.
ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊದಲ ಪಿಯು ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಕಠಿನ ಪರಿಶ್ರಮ ಹಾಗೂ ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಬದುಕನ್ನು ಸುಂದರಗೊಳಿಸಿಕೊಳ್ಳಲು ಕರೆಕೊಟ್ಟರು.
ಹಾಗೆಯೇ ವಿದ್ಯಾರ್ಥಿಗಳನ್ನು ರಂಜಿಸಿದರು.
ಕಾಲೇಜಿನ ಪಿಯು ವಿಭಾಗದ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಮಾತನಾಡಿ, ಯಾರಿಂದಲೂ ಕದಿಯಲಾಗದ ಮತ್ತು ಕಸಿಯಲಾಗದ ಶಾಶ್ವತ ಚಿರ ಸಂಪತ್ತು ವಿದ್ಯೆ ಮಾತ್ರ. ಹಾಗಾಗಿ ವಿದ್ಯೆಯನ್ನು ಅವಿರತ ಶ್ರಮದಿಂದ ಪಡೆದುಕೊಳ್ಳಬೇಕು ವಿದ್ಯೆಯೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಮಾರಂಭದಲ್ಲಿ ಕಲಾವಿದ ಅನೀಶ್ ವೇಣೂರು ರವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕೋಶಾಧಿಕಾರಿ ಎನ್.ಎನ್. ನಂಜಪ್ಪ, ಕಛೇರಿ ಅಧೀಕ್ಷಕ ಮಹೇಶ್ ಅಮೀನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!