ಟ್ರೆಂಡಿಂಗ್

ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ತಂಡ ಸ್ಧಳ ಪರಿಶೀಲನೆ.

ಕುಶಾಲನಗರ, ಜ‌ 05: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಹೈಟೆಕ್ ಶೌಚಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10.40 ಲಕ್ಷ ವೆಚ್ಚದ ಕಟ್ಟಡವನ್ನು ನಿರ್ಮಾಣಗೊಳಿಸಲು ಕ್ರಿಯಾ ಯೋಜನೆ ನಡೆದಿರುವ ಹಿನ್ನೆಲೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ನವರ ಸೇರಿದಂತೆ ತಂಡದವರು ಭೇಟಿ ನೀಡಿ ಸ್ಧಳ ಪರಿಶೀಲನೆ ನಡೆಸಿದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ಉದ್ಯೋಗ ಖಾತರಿ ಯೋಜನೆಯ ಅಡಿಯ 2.60. ಲಕ್ಷ ಹಣ, ಮತ್ತು ಜಿಲ್ಲಾ ಪಂಚಾಯತ್ ನಿಂದ. 7.80 ಲಕ್ಷ ಸೇರಿ ಒಟ್ಟು 10.40. ಲಕ್ಷ ವೆಚ್ಚದ ಶೌಚಾಲಯದ ನಿರ್ಮಾಣಕ್ಕೆ ಹಣವು ಮಂಜೂರು ಅಗಿರುವ ಹಿನ್ನೆಲೆಯಲ್ಲಿ ಸ್ಧಳ ಪರಿಶೀಲನೆ ನೆಡೆಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ . ಕೆ. ನಾಗರಾಜಶೆಟ್ಟಿ, ಪ್ರಾಂಶುಪಾಲ ಡಾ. ಬಸಪ್ಪ, ಅಭಿವೃದ್ಧಿ ಅಧಿಕಾರಿ ಸಂತೋಷ್, ಇಂಜಿನಿಯರ್ ಕಾರ್ತಿಕ್, ಕರವಸೂಲಿಗಾರ ಅವಿನಾಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!