ಕಾಮಗಾರಿ

ನಂಜರಾಯಪಟ್ಟಣ ಗ್ರಾಪಂ: ಚರಂಡಿ ನಿರ್ಮಾಣ‌ ಕಾಮಗಾರಿಗೆ ಭೂಮಿಪೂಜೆ

ಕುಶಾಲನಗರ, ಜ 05: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ರೂ 5.16 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ‌.ಎಲ್.ವಿಶ್ವ,‌ ಉಪಾಧ್ಯಕ್ಷೆ ಕುಸುಮ‌ ಮತ್ತು ಸದಸ್ಯರು ನೂತನ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಮಳೆ‌ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿವೆ. ಈ ಹಿನ್ನಲೆಯಲ್ಲಿ ಸಂತ್ರಸ್ಥ ನಿವಾಸಿಗಳ ಪ್ರಮುಖ ಬೇಡಿಕೆ ಅನ್ವಯ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಪ್ರಥಮ ಕಾಮಗಾರಿ ಇದಾಗಿದ್ದು, ಗುಳಿಗ ದೇವಾಲಯದಿಂದ ಶಂಕರ ಮನೆ ಮುಂಭಾಗ ಹಾದು ಹೋಗುವ ಚರಂಡಿ, ಮೀನುಕೊಲ್ಲಿ ಚೋಮಿ, ಸುಶೀಲ ಅವರ ಮನೆ ಮುಂಭಾಗ, ಕಾವೇರಿ ಕಾಲನಿಯ ಮಾದಿ, ಬೋಜಿ ಮನೆ‌ ಮುಂಭಾಗ, ಗ್ರಾಮದ ಆರೀಸ್ ಅವರ ಮನೆಯಿಂದ ಪಾತೆ ಅವರ ಮನೆ ಮುಂಭಾಗದಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.
2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ನಂಜರಾಯಪಟ್ಟಣ ಬ್ಲಾಕ್ ನಲ್ಲಿ‌ 8 ಲಕ್ಷ ಹಾಗೂ ರಂಗಸಮುದ್ರ ಬ್ಲಾಕ್‌ನಲ್ಲಿ ರೂ 8 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ರೂಪಿಸಲಾಗಿದೆ.
ಕಳೆದ ಅವಧಿಯಲ್ಲಿ ಗ್ರಾಪಂ ವತಿಯಿಂದ 1 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯ, ಚರ್ಚ್, ಮಸೀದಿಗಳಿಗೆ ಕೂಡ ಅನುದಾನ ಒದಗಿಸಲಾಗಿದೆ
ಎಂದು ತಿಳಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯೆ ಸಮೀರ, ಕಾರ್ಯದರ್ಶಿ ಶೇಷಗಿರಿ, ಗುತ್ತಿಗೆದಾರ ಬಿ.
ಎಚ್.ಅಹಮ್ಮದ್, ಮೊಹಮ್ಮದ್ ಫಯಾಜ್ ಸೇರಿದಂತೆ ಗ್ರಾಮಸ್ಥರಾದ ಕೌಸಲ್ಯ, ರಾಮು, ಶಂಕರ, ಕಿರಣ್, ರಕ್ಷಿತ್, ಕಿಶೋರ್, ಶಿಯಾಬ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!