ಟ್ರೆಂಡಿಂಗ್

ಸಾಮಾನ್ಯ ಸಾಲಗಾರರ ಹಿಂದುಳಿದ ವರ್ಗ ಕ್ಷೇತ್ರದಿಂದ ರವಿಕುಮಾರ್ ಬಿ.ಗೌಡಯ್ಯ ನಾಮಪತ್ರ ಸಲ್ಲಿಕೆ

ಕುಶಾಲನಗರ, ಡಿ 26: ದಿನಾಂಕ 5-1-2025ನೇ ಭಾನುವಾರ ನಡೆಯಲಿರುವ ನಂ.112 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕುಶಾಲನಗರ ಇದರ 2025 -2030 ವರೆಗಿನ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ .ಸಾಮಾನ್ಯ ಸಾಲಗಾರರ ಹಿಂದುಳಿದ ವರ್ಗ ( ಪ್ರವರ್ಗ ‘ ಬಿ ‘ ) ಕ್ಷೇತ್ರದಿಂದ ರವಿಕುಮಾರ್ ಬಿ.ಗೌಡಯ್ಯ ಗುಮ್ಮನಕೊಲ್ಲಿ .ವಿವಿಧ ಪಕ್ಷದ ಮುಖಂಡರು ಹಾಗೂ ತಮ್ಮ ಬೆಂಬಲಿಗರ ಜೊತೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು .ನಂತರ ಮಾತನಾಡಿ ಸಂಘದ ಉನ್ನತಿಗಾಗಿ ಮತ್ತು ರೈತ ಭಾಂದವರಿಗೆ ಹಾಗೂ ಸಂಘದ ಇತರ ಎಲ್ಲಾ ಸದಸ್ಯರುಗಳಿಗೂ ಸಂಘದ ವತಿಯಿಂದ ದೊರೆಯುವ ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ದೊರಕಿಸಿಕೊಡಲು ಮತ್ತು ರೈತರ ಹಿತಶಕ್ತಿ, ಕುಂದು ಕೊರತೆ ,ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿ ಪರಿಹಾರ ರೂಪಿಸುವ ಯತ್ನವನ್ನು ಮಾಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ,ನಗರ ಕಾಂಗ್ರೆಸ್ ಅಧ್ಯಕ್ಷ ವಿಕ್ಟರ್ ಸೋನ್ಸ್ ,ಬಿಜೆಪಿ ಮುಖಂಡ ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಆಸಿಫ್ ಸಿ.ಎಂ.ಮಾತನಾಡಿ ಸಹಕಾರ ಸಂಘದ ಚುನಾವಣೆಯಲ್ಲಿ ರವಿಕುಮಾರ್ ಬಿ.ಗೌಡಯ್ಯ ಅವರನ್ನು ಬೆಂಬಲಿಸುವ ಮೂಲಕ ಗೆಲುವು ಸಾಧಿಸುತ್ತೆವೆ ಎಂದರು.

ಚುನಾವಣಾ ಅಧಿಕಾರಿ ರವಿಕಾಂತ್ ನಾಮ ಪತ್ರವನ್ನು ಸ್ವೀಕರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!