ಕುಶಾಲನಗರ, ನ 22: ಕುಶಾಲನಗರ ಪಟ್ಟಣದ ಫೀಲ್ಡ್ ಮಾಸ್ಟರ್ ಕಾರ್ಯಪ್ಪ ವೃತ್ತದಲ್ಲಿ ಅಳವಡಿಸಿದ್ದ ಆಂಗ್ಲ ಭಾಷೆಯ ಬ್ಯಾನರ್ ವಿರುದ್ದ ಹೆಚ್. ಶಿವರಾಮೇಗೌಡರ ಕರವೇ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ದಿನೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಆಂಗ್ಲ ಭಾಷೆಯಲ್ಲಿ ಅಳವಡಿಸಿದ ಬ್ಯಾನರನ್ನು ಕಿತ್ತು ನೆಲಕ್ಕೆ ಬಿಸಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಇದೇ ಸಂದರ್ಭ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಹೆಚ್ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ದಿನೇಶ್, ಇತ್ತೀಚಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಆಂಗ್ಲ ಭಾಷೆಯ ಬ್ಯಾನರ್ ಗಳು ರಾರಾಜಿಸುತ್ತಿದ್ದು ಪುರಸಭೆ ಅಧಿಕಾರಿಗಳು ಗಮನಹರಿಸದೆ ಇರುವುದು ಕನ್ನಡಕ್ಕೆ ಮಾಡಿದ ಅವ ಮಾನ ಬ್ಯಾನರ್ ಅಳವಡಿಸಲು ಯಾವ ರೀತಿ ಪರವಾನಗಿ ಕೊಟ್ಟಿದ್ದಾರೆ ತಿಳಿಯುತ್ತಿಲ್ಲ ಆಂಗ್ಲ ವ್ಯಾಮೋಹದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪುರಸಭೆ ಮುಂಭಾಗ ಹೋರಾಟ ಮಾಡಲಾಗುವುದು ಎಂದರು. ಬಳಿಕ ಮಾತನಾಡಿದ ಜಿಲ್ಲಾ ಗೌರವ ಅಧ್ಯಕ್ಷ ಕೆ .ಚಂದ್ರು ಆಂಗ್ಲ ಭಾಷೆಯ ಬ್ಯಾನರ್ ಗಳ ಅಳವಡಿಕೆ ಕಂಡರೂ ಅಧಿಕಾರಿಗಳು ಕಂಡು ಕಾಣದಂತೆ ಇರುವುದು ವಿಪರ್ಯಾಸ. ಕೂಡಲೇ ಆಂಗ್ಲ ಬ್ಯಾನರ್ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಇದೇ ಸಂದರ್ಭ ತಾಲೂಕು ಸಂಚಾಲಕ ರಂಗಸ್ವಾಮಿ, ಪ್ರಮುಖರಾದ ಸತೀಶ್ ಜಯರಾಜ್ ಮುಂತಾದವರಿದ್ದರು
Back to top button
error: Content is protected !!