ಕುಶಾಲನಗರ, ಫೆ 10: ಕೂಡುಮಂಗಳೂರಿನ ಟುಲೀಪ್ ಟ್ರಸ್ಟ್.(ರಿ) ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ, ಪ್ರತಿಭೆ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುಮ್ಮನಕೊಲ್ಲಿಯ ಮೂಕಾಂಬಿಕಾ ವಿದ್ಯಾಸಂಸ್ಥೆಯಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದಂತಹ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ನಗದು ಬಹುಮಾನದ ಜೊತೆಗೆ ಪ್ರಮಾಣ ಪತ್ರವನ್ನು ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಟುಲೀಪ್ ಟ್ರಸ್ಟ್ ಅಧ್ಯಕ್ಷ ಚಂದನ್, ವಿದ್ಯಾರ್ಥಿಗಳು ಯಾವುದೇ ಕ್ಲಿಷ್ಟಕರ ಸನ್ನಿವೇಶದಲ್ಲೂ ಧೃತಿಗೆಡದೆ, ಬಂದಂತಹ ಯಾವುದೇ ಸಮಸ್ಯೆಯನ್ನು ಎದುರಿಸಿ ಮುಂದೆ ಸಾಗಬೇಕು. ಪ್ರಕೃತಿಯಲ್ಲಿ ಎಲ್ಲರೂ ಒಂದೇ. ಯಾಕೆಂದರೆ ಚಳಿಗಾಲದಲ್ಲಿ ಮರಗಳ ಎಲೆ ಉದುರುವುದು, ಮನುಷ್ಯನ ಚರ್ಮದ ಮೇಲ್ಮೈ ಬಿರುಕು ಬಿಡುವುದು ಹಾಗೆ ಪ್ರಾಣಿಗಳ ಕೂದಲು ಚರ್ಮದಲ್ಲು ಬದಲಾವಣೆ ಕಂಡುಬರುತ್ತದೆ. ಹೊಸ ಚಿಗುರಿಗಾಗಿ ಹೇಗೆ ಮರಗಳು ಕಾಯುತ್ತೇವೆ ಹಾಗೆ ನಾವು ಕೂಡ ಕಾದು ಸೋಲನ್ನು ಮೆಟ್ಟಿನಿಂತು ಹೊಸ ಚೈತನ್ಯವನ್ನು ಕಾಣಬೇಕು. ಸಿಕ್ಕ ಜೀವವನ್ನು ನಮ್ಮಿಂದ ನಾವೆ ಕಳೆದುಕೊಳ್ಳದೆ ಮೆಟ್ಟಿನಿಂತು ಜಯಿಸಬೇಕು. ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ನಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಾಗಬೇಕು ಎನ್ನುವ ಉದ್ದೇಶದಿಂದ ನಮ್ಮ ಟ್ರಸ್ಟ್ ಪ್ರತಿಭೆಗಳ ಅನಾವರಣ ಆಗಲೆಂದು ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ, ಪ್ರೌಢಶಾಲೆಯ ಮೂಖ್ಯೋಪಾಧ್ಯಾಯ ಸುರೇಶ್, ಹಾಗೂ ಮೂಕಾಂಬಿಕಾ ವಿದ್ಯಾ ಸಂಸ್ಥೆಯ ಶಿಕ್ಷಕರು , ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Back to top button
error: Content is protected !!