ಕುಶಾಲನಗರ, ಏ 26: ಕೊಡಗು ಜಿಲ್ಲೆಯ ಹಿರಿಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೆ. ಪಿ. ಸಿ. ಸಿ ಯ ಮಾಜಿ ಉಪಾಧ್ಯಕ್ಷರು,ಕಾಂಗ್ರೆಸ್ ಸೇವಾದಳ ಘಟಕದ ಮಾಜಿ ರಾಜ್ಯಾದ್ಯಕ್ಷರು ಪ್ರವಾಸೋದ್ಯಮಿಯಾಗಿ,ಕಾಫಿ ಉದ್ಯಮಿಯಾಗಿ, ಪ್ರಗತಿಪರ ಕೃಷಿಕರಾಗಿ, ಎಲ್ಲರ ಪ್ರೀತಿ ಗಳಿಸಿದ್ದ ಎಲ್ಲಾ ವರ್ಗದವರ ಗಮನ ಸೆಳೆದಿದ್ದ ಸ್ನೇಹಜೀವಿ ವಿಶೇಷ ವ್ಯಕ್ತಿತ್ವದ ಶ್ರೀ ಮಿಟ್ಟು ಚಂಗಪ್ಪನವರ ನಿಧನ ಇಡೀ ಕೊಡಗಿಗೆ ಅದರಲ್ಲೂ ವಿಶೇಷವಾಗಿ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಶ್ರೀಯುತ ಮಿಟ್ಟು ಚಂಗಪ್ಪನವರು ಧೀಮಂತ ವ್ಯಕ್ತಿತ್ವದ ನಾಯಕರಾಗಿದ್ದರು.ಕೊಡಗಿನ ರಾಜಕೀಯದ ಕಿಂಗ್ ಮೇಕರ್ ಆಗಿ ಪಕ್ಷಕ್ಕಾಗಿ ಸಮಾಜಕ್ಕಾಗಿ ತನ್ನಿಂದಾದ ಹೆಚ್ಚಿನ ಸಹಕಾರವನ್ನು ನೀಡಿದಂತಹ ಓರ್ವ ಧೀಮಂತ ವ್ಯಕ್ತಿ. ನಮ್ಮೆಲರ ಪ್ರೀತಿಯ ಮಿಟ್ಟು ಅಂಕಲ್ ಹಾಗೂ ನನ್ನ ಸಂಬಧಿಯು ಆದ ಇವರ ನಿಧನವು ತೀವ್ರ ನೋವುಂಟು ಮಾಡಿದೆ ಎಂದು ಇವರ ನಿಧನಕ್ಕೆ ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ತೀವ್ರ ಶೋಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಮಿಟ್ಟು ಚಂಗಪ್ಪನವರು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಗುಂಡೂರಾವ್, ಎಸ್. ಎಂ ಕೃಷ್ಣ ಈಗಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಸೇರಿದಂತೆ ಹಲವು ಹಿರಿಯ ನಾಯಕರುಗಳ ಆತ್ಮೀಯರಾಗಿದ್ದರು ಎಂದು ಪಾಂಬಾರು ಹೇಳಿದ್ದಾರೆ.
Back to top button
error: Content is protected !!