ಧಾರ್ಮಿಕ

ಧರ್ಮಪುರಂ ಅಧೀನ ಮಠಾಧಿಪತಿಗಳಾದ ಸಂತ ಜ್ಞಾನಸಂಬಂಧರ್ ಸ್ವಾಮೀಜಿಗೆ ಕುಶಾಲನಗರದಲ್ಲಿ ಸ್ವಾಗತ

ಕುಶಾಲನಗರ, ಜೂ 17: ತಮಿಳುನಾಡಿನ 27 ಭವ್ಯ ಶಿವ ದೇವಾಲಯಗಳ ಧರ್ಮಪುರಂ ಅಧೀನ ಮಠಾಧಿಪತಿಗಳಾದ ಸಂತ ಜ್ಞಾನಸಂಬಂಧರ್ ಸ್ವಾಮೀಜಿ (ಪ್ರಧಾನಿ ನರೇಂದ್ರ ಮೋದಿಜೀ ಯವರಿಗೆ ಭಾರತದ ಪ್ರಾಚೀನ ಪರಂಪರೆಯ ಧರ್ಮದಂಡ ಸೆಂಗೋಲ್ ಅನ್ನು ದೆಹಲಿಯ ನೂತನ ಸಂಸತ್ ಭವನಕ್ಕೆ ಸಮರ್ಪಣೆ ಮಾಡಿದ ಸಂತ ಜ್ಞಾನಸಂಬಂಧರ್ ಸ್ವಾಮೀಜಿಯನ್ನು) ಕೊಡಗಿಗೆ ಆಗಮಿಸಿದ ಸಂದರ್ಭ ಹಿಂದೂಪರ ಸಂಘಟನೆ ಪ್ರಮುಖರು ಸ್ವಾಗತಿಸಿದರು. ಬೆಂಗಳೂರಿನಲ್ಲಿ ನಡೆದ ಸಾಧು ಸಂತರ ಸಮ್ಮೇಳನದಿಂದ ತಲಕಾವೇರಿಗೆ ಆಗಮಿಸಿದ ಅವರನ್ನು ಕುಶಾಲನಗರದ ಕಾವೇರಿ ಪ್ರತಿಮೆ ಬಳಿ ಸ್ವಾಗತಿಸಿ, ಆಶೀರ್ವಾದ ಪಡೆದುಕೊಳ್ಳಲಾಯಿತು.

ಈ ಸಂದರ್ಭ ಪ್ರಮುಖರಾದ ರಾಮನಾಥನ್, ಚಂದ್ರಶೇಖರ್ ಹೇರೂರು, ಮಧುಸೂಧನ್, ಮಹೇಶ್ ಅಮಿನ್, ಮಧು,ರಾಮಸ್ವಾಮಿ , ವಿಘ್ನೇಶ್ ಹಾಗೂ ಬಾಲಕೃಷ್ಣ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!