ಅರಣ್ಯ ವನ್ಯಜೀವಿ

ಮೊಸಳೆ ಹಾವಳಿ: ಕೆರೆ ಪರಿಸರ ಸ್ವಚ್ಚಗೊಳಿಸಿದ ಕೂಡುಮಂಗಳೂರು ಗ್ರಾಪಂ

ಕುಶಾಲನಗರ, ಸೆ 23: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿನ ಕೊಡಗು ಸೈನಿಕ ಶಾಲೆ ಸಮೀಪ ತೋಟಗಾರಿಕಾ ಇಲಾಖೆ ಜಾಗದಲ್ಲಿದ್ದ ಕೆರೆ ಮಾದರಿ ಗುಂಡಿಯನ್ನು ಸ್ವಚ್ಛಗೊಳಿಸಲಾಯಿತು.

ಈ ಗುಂಡಿ ನೀರಿನಲ್ಲಿ‌ ಮೊಸಳೆ ಕಂಡುಬಂದ ದೂರಿನ ಹಿನ್ನಲೆಯಲ್ಲಿ ಕೂಡಲೆ ಕಾರ್ಯಪ್ರವೃತ್ತರಾದ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಜೆಸಿಬಿ ಮೂಲಕ ಕೆರೆ ಸುತ್ತಲಿನ ಕಾಡನ್ನು ತೆರವುಗೊಳಿಸಿದರು.

ಈ ಭಾಗದಲ್ಲಿ ಮೇಯಲು‌ ಬಿಟ್ಟಿದ್ದ ಕುರಿ, ಆಡುಗಳು ಕಾಣೆಯಾಗುತ್ತಿದ್ದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದರು. ನಾಯಿಗಳು ಬೇಟೆಯಾಡಿ ಕೊಂದಿರಬಹುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಇತ್ತೀಚೆಗೆ ಕೆಲವರು ಈ ಗುಂಡಿಯೊಳಗೆ ಮೊಸಳೆ ಇರುವುದು ಗಮನಿಸಿದ್ದಾರೆ.ಸೈನಿಕ ಶಾಲೆಯ ಸಿಬ್ಬಂದಿಗಳಿಗೆ ಕೂಡ ಮೊಸಳೆ ಕಂಡುಬಂದ ಹಿನ್ನೆಲೆಯಲ್ಲಿ ಮೊಸಳೆ‌ ಇರುವುದು ಖಾತ್ರಿಯಾಗಿ ಗುಂಡಿ ಸುತ್ತಲೂ ಕಾಡನ್ನು ಸ್ವಚ್ಚಗೊಳಿಸಲಾಗಿದೆ. ಮೊಸಳೆ ಹಿಡಿಯಲು ಬೋನ್ ಅಳವಡಿಸಲು ಕೋರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಲಾಗಿದೆ ಎಂದು ಗ್ರಾಪಂ‌ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದ್ದಾರೆ.

ಈ ಸಂದರ್ಭ ಗ್ರಾಪಂ ಸದಸ್ಯೆ ಫಿಲೋಮಿನಾ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!