ಕುಶಾಲನಗರ, ಮಾ 24:
ಪಂಜಾಬ್ ನಲ್ಲಿ ನಡೆದ 45ನೇ ಅಂತರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಜಿಲ್ಲೆಯ ಕುಶಾಲನಗರದ ಮಹಿಳೆ ಚಿನ್ನದ ಪದಕ ಗಳಿಸಿದ್ದಾರೆ.
ಕುಶಾಲನಗರ ಸಮೀಪದ ಗುಡ್ಡೆ ಹೊಸೂರು ನಿವಾಸಿ ಐಮುಡಿಯಂಡ ಶೈಲಾ ಕುಶಾಲಪ್ಪ ಅವರು ಈ ತಿಂಗಳ 14ರಿಂದ ಎರಡು ದಿನಗಳ ಕಾಲ ಪಂಜಾಬ್ ಭಟಿಯಂಡ ನಗರದ ಗುರು ಕಾಶಿ ವಿಶ್ವವಿದ್ಯಾಲಯ ಕ್ರೀಡಾ ಮೈದಾನದಲ್ಲಿ ನಡೆದ 200 ಮೀಟರ್, 1500 ಮೀಟರ್ ಓಟ 100 ಮೀಟರ್ ಹರ್ಡಲ್ಸ್ ಮತ್ತು ರಿಲೇ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಜಿಲ್ಲೆಯಿಂದ ಒಟ್ಟು ಐದು ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಶೈಲಾ ಕುಶಾಲಪ್ಪ ಅವರು ಈ ಹಿಂದೆ ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯ ರಾಷ್ಟ್ರೀಯ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ.
Back to top button
error: Content is protected !!