ಕಾರ್ಯಕ್ರಮ

ನಂಜರಾಯಪಟ್ಟಣದ ಮುಸ್ಲಿಂ ಜಮಾಅತ್ ಕಮಿಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

ಕುಶಾಲನಗರ, ಜು‌ 20: ನಂಜರಾಯಪಟ್ಟಣದ ಮುಸ್ಲಿಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನೂರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.‌ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಶಿಬಿರಕ್ಕೆ ಚಾಲನೆ‌ ನೀಡಿದರು. ನಂತರ ಮಾತನಾಡಿದ ಅವರು, ಜಮಾಅತ್ ಮೂಲಕ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರ ಈ‌ ಭಾಗದ ದಾನಿಗಳಿಗೆ ಒಂದು‌ ವೇದಿಕೆ ಕಲ್ಪಿಸಿದಂತಾಗಿದೆ. ಮದರಸ ಮೂಲಕ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಒಂದು ವಿಶೇಷ ಸಂಗತಿ.‌ ಕಮಿಟಿಯ ಈ‌ ಸಾಮಾಜಿಕ ಕಾರ್ಯಕ್ರಮಗಳಿಗೆ ಪಂಚಾಯ್ತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.‌

ಮಸೀದಿ ಧರ್ಮಗುರು ಬಷೀರ್ ಅಜ್ಹರಿ ಕತ್ತಲೆಕಾಡು ಅವರು ಮಾತನಾಡಿ, ಮದರಸ ಎಂಬುದು ಕೇವಲ‌ ಧಾರ್ಮಿಕ ಕಾರ್ಯಕ್ರಮಕ್ಕೆ‌ ಮಾತ್ರ ಸೀಮಿತ ಎಂಬ ‌ವಿಚಾರ ಹೊರತುಪಡಿಸಿ ಇಂತಹ ಸಮಾಜಮುಖಿ‌ ಚಿಂತನೆಗಳಿಗೆ ಜೀವ ಕೊಡುವ ಕೇಂದ್ರವಾಗಿಯೂ ತನ್ನ ಕಾರ್ಯ ವಿಸ್ತರಿಸಿದೆ. ಪ್ರತಿಯೊಬ್ಬರು ಕೂಡ ಆರೋಗ್ಯವಂತ ಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದಬೇಕಿರುವುದು ಅವಶ್ಯಕವಾಗಿದೆ.‌ಎಲ್ಲಾ ದಾನಕ್ಕಿಂತ ಶ್ರೇಷ್ಠವಾದ ರಕ್ತದಾನಕ್ಕೆ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕಿದೆ ಎಂದರು.

ರಕ್ತನಿಧಿ ಕೇಂದ್ರದ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ಅರಿತುಕೊಂಡು‌ ರಕ್ತದಾನಕ್ಕೆ ಮುಂದಾಗಿ ರಕ್ತದ ಕೊರತೆ ನೀಗಿಸಬೇಕಿದೆ ಎಂದು ಕರೆ ನೀಡಿದರು.

ಗ್ರಾಪಂ ಸದಸ್ಯ ಮಾವಾಜಿ ರಕ್ಷಿತ್ ಮಾತನಾಡಿದರು.

ಜಮಾಅತ್ ಕಮಿಟಿ ಅಧ್ಯಕ್ಷ ಎಂ.ಎ.ಅಮೀರ್ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ‌ರಕ್ತದಾನ ಮಾಡಿದ 60 ಕ್ಕೂ ಅಧಿಕ ಮಂದಿಗೆ ಪ್ರಮಾಣ ಪತ್ರ, ನೆನಪಿನ‌ ಕಾಣಿಕೆ ನೀಡಲಾಯಿತು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಸಮೀರ,ಆರ್.ಕೆ.ಚಂದ್ರ, ಕುಸುಮ, ಜಾಜಿ, ಗಿರಿಜಮ್ಮ, ಮಸೀದಿ ಧರ್ಮಗುರು ಜುಬೇರ್ ಮುಸ್ಬಾಹಿ,ಕಮಿಟಿ ಉಪಾಧ್ಯಕ್ಷ ಎಂ.ಎ.ಬಷೀರ್, ಮಾಜಿ ಅಧ್ಯಕ್ಷರಾದ ಅಬ್ದುಲ್ಲಾ, ಕೆ.ಪಿ.ಮಹಮ್ಮದ್, ಕಾರ್ಯದರ್ಶಿ ಹ್ಯಾರಿಸ್, ಸಹ ಕಾರ್ಯದರ್ಶಿ ಅನೀಶ್, ಖಜಾಂಚಿ ಎಂ.ಎಂ.ಹ್ಯಾರಿಸ್, ಯೂತ್ ಕಮಿಟಿ ಅಧ್ಯಕ್ಷ ಹನೀಫ್ ಅಶ್ರಫಿ, ಪ್ರಮುಖರಾದ ನೌಶಾದ್, ಶರೀಫ್, ಹಂಸ, ನಜೀರ್, ರಫೀಕ್, ಅಲಿ, ಶಫೀರ್, ಫಯಾಜ್, ಆಶಿಕ್, ಅರ್ಷಾದ್, ಬಷೀರ್, ಖಲೀಲ್, ಇರ್ಷಾದ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!