ಶಿಕ್ಷಣ

ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಪ್ರಾರಂಭೋತ್ಸವ

ಕುಶಾಲನಗರ, ಜು 15: 2025 -26 ನೇ ಸಾಲಿಗೆ ಕರ್ನಾಟಕ ಸರ್ಕಾರ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರಾರಂಭ ಮಾಡಲು ಅನುಮತಿ ನೀಡಿದ್ದು,ಈ ಸಂಬಂಧ ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನೇರುಗಳಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿ ಎಮ್ ವಿಜಯ್ ರವರು ಮಾತನಾಡಿ ಆಂಗ್ಲಮಾಧ್ಯಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತಿ ಅಗತ್ಯವಾಗಿದ್ದು,ಘನ ಸರ್ಕಾರ ನಮ್ಮೂರಿನ ಶಾಲೆಗೆ ಇದರ ಸದುಪಯೋಗವನ್ನು ಮಾಡಿದ್ದು,ಸರ್ಕಾರದ ನಿರ್ಧಾರವನ್ನು ಸ್ಲಾಘಿಸುತ್ತಾ,ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಕಲಿತು ಸಮಾಜದ ಸಧೃಡ ಪ್ರಜೆಗಳಾಗಿ ರೂಪುಗೊಳ್ಳಬೇಕು.ಇಂದಿನ‌ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಆಂಗ್ಲ ಮಾಧ್ಯಮದ ಅಗತ್ಯತೆಯನ್ನು ಒತ್ತಿ ಹೇಳಿ,ತಾವೆಲ್ಲರೂ ಭವ್ಯಭಾರತದ ಸತ್ಪ್ರಜೆಗಳಾಗಲು ಮನಸ್ಸು ಮಾಡಬೇಕೆಂದು,ಊರಿಗೆ ಹಾಗೂ ಕಲಿಸಿದ ಗುರುಹಿರಿಯರಿಗೆ ಗೌರವ ತರುವಂತಹ ಕಾಯಕ ನಿಮ್ಮಿಂದಾಗಬೇಕೆಂದು ಸಲಹೆ ನೀಡಿದರು.ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎಸ್ ಎಮ್ ಡಿ ಸಿಲ್ವಾ..ರವರು ಮಾತನಾಡಿ,ಅಂಕುರಂ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ನ ವತಿಯಿಂದ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 5 ಕೊಠಡಿಗಳನ್ನು ನವೀಕರಣ ಮಾಡಿ ಅದರಲ್ಲಿ ಎಲ್ ಕೆ ಜಿ ಹಾಗೂ ಯು ಕೆ ಜಿ ತರಗತಿಗಳನ್ನು ಆದುನಿಕ ಸ್ಪರ್ಶ ನೀಡಿ ನವೀಕರಣ ಮಾಡಿರುವ ಕಾರ್ಯವನ್ನು ಶ್ಲಾಘಿಸುತ್ತಾ,ಈ ಕಾರ್ಯಕ್ಕೆ ಕೈಜೋಡಿಸಿದ ಸರ್ವರನ್ನು ಅಭಿನಂದಿಸಿದರು,ಹಾಗೂ ಮುಂದೆಯೂ ನಮ್ಮೂರಿನ ಶಾಲೆಯಲ್ಲಿ ಹೆಚ್ಚು ಮಕ್ಕಳು ದಾಖಲಾಗಿ ಸರ್ಕಾರಿ ಶಾಲೆಯ ಸಬಲೀಕರಣಕ್ಕೆ ನಮ್ಮ ಟ್ರಸ್ಟ್ ಸಹಾಯವನ್ನು ನಿರಂತರವಾಗಿ ಮಾಡುತ್ತದೆಂದು ತಿಳಿಸಿದರು.ಗ್ರಾಮ‌ ಪಂಚಾಯಿತಿ ಅಧ್ಯಕ್ಷರಾದ ಶ್ರೀ ವಿನೋದ್ ಕುಮಾರ್ ರವರು ಮಾತನಾಡಿ ಗ್ರಾಮೀಣ ಬಡವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಈ ಸವಲತ್ತುನ್ನು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪೋಷಕರು ಬಳಸಿಕೊಳ್ಳಲು ತಿಳಿಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಿಲೀಪ್ ರವರು ಅಧ್ಯಕ್ಷರು ಎಸ್ ಡಿ ಎಮ್ ಸಿ ಅವರು ವಹಿಸಿಕೊಂಡಿದ್ದರು.ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಪುಷ್ಪಾ , ಪ್ರಕಾಶ್ ಹೆಚ್ ಆರ್, ಅಜಿತ್ ಕುಮಾರ್ ಎ ಜೆ ,ವಿನಯ್ ಸಂಭ್ರಮ್,ಅಂಕುರಂ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಭೋಜೆಗೌಡ,ಖಜಾಂಚಿಯವರಾದ ಶ್ರೀ ಎ ಹೆಚ್ ತಿಮ್ಮಯ್ಯ,ನಿರ್ದೇಶಕರಾದ ಶ್ರೀ ಕಿರಣ್ ಹೊಸಳ್ಳಿ,ಸಿ ಸಿ ಅಶ್ವಥ್,ಶೈಲಾ.ಪ್ರೌಢಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರವಿಕಮಾರ್ ,ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶ್ರೀಮತಿ ದೇಚಮ್ಮ ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಧ್ಯಕ್ಷರುಗಳು,ಪ್ರೌಢಶಾಲಾ ಮುಖ್ಯಶಿಕ್ಷಕರಾದ ಶ್ರೀಮತಿ ರಾಜೇಶ್ವರಿ,ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾದ ಶ್ರೀಮತಿ ಎಸ್ತೆಲಾ ಹಾಗೂ ಉಭಯ ಶಾಲಾ ಶಿಕ್ಷಕರು ಮತ್ತು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು.ಅಂಕುರಂ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ನ ಸಂಚಾಲಕರಾದ ಶ್ರೀ ರತ್ನಕುಮಾರ್ ಕೆ ಆರ್ ಅವರು ನಿರೂಪಿಸಿದರು,ನಿರ್ದೇಶಕರಾದ ಶ್ರೀ ರಮೇಶ್ ರವರು ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!