ಟ್ರೆಂಡಿಂಗ್

ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ಯತ್ನ: ವ್ಯಕ್ತಿ ಪೊಲೀಸ್ ವಶಕ್ಕೆ

ಕುಶಾಲನಗರ, ಡಿ 09: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿ (ಕೆಡಿಸಿಸಿ) ಮಡಿಕೇರಿ ಮುಖ್ಯ ಶಾಖೆಯಲ್ಲಿ ದಿನಾಂಕ: 04-12-2024 ರಂದು ಮೊಹಮ್ಮದ್ ರಿಜ್ವಾನ್.ಕೆ.ಎ ಎಂಬಾತ 08 ಚಿನ್ನದ ಬಳೆಗಳನ್ನು ಅಡಮಾನ ಮಾಡಿ ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ಆಭರಣವನ್ನು ಪರಿಶೀಲಿಸಲಾಗಿ ನಕಲಿ ಆಭರಣ ಎಂದು ತಿಳಿದುಬಂದಿರುತ್ತದೆ. ಆದ್ದರಿಂದ ಸದರಿ ವ್ಯಕ್ತಿಯು ಈ ಹಿಂದೆ ಶಾಖೆಯಲ್ಲಿ ಅಡಮಾನ ಮಾಡಿರುವ ಆಭರಣಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ ಎಲ್ಲಾ ಆಭರಣಗಳು ನಕಲಿಯಾಗಿರುವುದು ಕಂಡುಬಂದಿರುತ್ತದೆ ಹಾಗೂ ಜಿಲ್ಲೆಯಲ್ಲಿನ ವಿವಿಧ ಕೆಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಅಡಮಾನ ಮಾಡಿರುವ ಚಿನ್ನವನ್ನು ಪರಿಶೀಲಿಸಿದ್ದು, ವಿರಾಜಪೇಟೆ, ಕಡಂಗ, ಭಾಗಮಂಡಲ ಮತ್ತು ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಶಾಖೆಯಲ್ಲಿ ನಕಲಿ ಆಭರಣಗಳನ್ನು ಅಡಮಾನ ಮಾಡಿ ಸಾಲ ಮಾಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಿದ್ದು, ಮಡಿಕೇರಿ ನಗರ, ವಿರಾಜಪೇಟೆ ನಗರ, ಭಾಗಮಂಡಲ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಸದರಿ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ರವಿ, ಡಿಎಪಿ, ಮಡಿಕೇರಿ ಉಪವಿಭಾಗ, ರಾಜು.ಪಿ.ಕೆ, ಸಿಪಿಐ, ಮಡಿಕೇರಿ ನಗರ ವೃತ್ತ,  ಅನೂಪ್ ಮಾದಪ್ಪ , ಸಿಪಿಐ, ಮಡಿಕೇರಿ ಗ್ರಾಮಾಂತರ ವೃತ್ತ,  ಮೇದಪ್ಪ, ಪಿಐ, ಡಿಸಿಆರ್.ಬಿ,  ಲೋಕೇಶ್, ಪಿಎಸ್‌ಐ, ಮಡಿಕೇರಿ ನಗರ ಪ್ರೊ.ಠಾ. ಶೋಭಾ ಲಾಮಣಿ, ಪಿಎಸ್ಐ, ಭಾಗಮಂಡಲ ಪ್ರೊ.ಠಾ. ಪ್ರಮೋದ್, ಪಿಎಸ್‌ಐ, ವಿರಾಜಪೇಟೆ ನಗರ ಪೊ.ಠಾ ಮತ್ತು  ವಾಣಿಶ್ರೀ.ಬಿ.ಎಸ್, ಪಿಎಸ್‌ಐ, ವಿರಾಜಪೇಟೆ ಗ್ರಾಮಾಂತರ ಪೊ.ಠಾ. ಮತ್ತು ಡಿಸಿಆರ್ ಬಿ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ವಿಶೇಷ ತನಿಖಾ ತಂಡವು ದಿನಾಂಕ: 05-12-2024 ರಂದು ಕುಂಜಿಲ ಗ್ರಾಮದ ನಿವಾಸಿಯಾದ ಮೊಹಮ್ಮದ್ ರಿಜ್ವಾನ್.ಕೆ.ಎ. 35 ವರ್ಷ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ತಲೆಮರೆಸಿಕೊಂಡಿರುವ ಬಾಕಿ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!