ಕುಶಾಲನಗರ ಮಾ 23: ಕುಶಾಲನಗರದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಡಿ.ಟಿ. ವಿಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಬೆಳವಣಿಗೆಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆಗಳು ನಡೆದವು. ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ. ರಾಜೇಶ್ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು. ಸಭೆಯಲ್ಲಿ ಹಾಜರಿದ್ದ ಸದಸ್ಯರು ಸಂಘದ ಅಭಿವೃದ್ಧಿಗೆ ಮತ್ತು ದೇವಾಲಯ ಕಟ್ಟಡದ ಪ್ರಗತಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಖಜಾಂಚಿ ಡಿ.ಆರ್. ಕೃಷ್ಣ ಕುಮಾರ್, ಪ್ರಮುಖರಾದ
ಡಿ. ಎಸ್. ಜಗದೀಶ್, ಡಿ. ಎಸ್. ಕೋದಂಡರಾಮ್, ಪುರಸಭೆ ಸದಸ್ಯ ಡಿ. ಕೆ. ತಿಮ್ಮಪ್ಪ, ಡಿ.ಟಿ. ನಾಗೇಂದ್ರ, ಡಿ.ಆರ್.ಸೋಮಶೇಖರ್, ಡಿ.ಕೆ
ಮಹೇಶ್, ಡಿ.ವಿ. ಚಂದ್ರು (ರಾಕಿ) ಸುಲೋಚನ ರಂಗಪ್ಪ, ನಂದಿನಿ, ಡಿ.ಎಸ್. ಯತೀರಾಜ್, ಡಿ.ಪಿ. ಮಧು, ಡಿ.ಪಿ.ಗಣೇಶ್ ಹಾಜರಿದ್ದರು.
ನಂತರ ಮಹಾಸಭೆಯಲ್ಲಿ ದೇವಾಂಗ ಸಂಘದ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಡಿ.ವಿ.ರಾಜೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್.ಕೃಷ್ಣ ಕುಮಾರ್ ಆಯ್ಕೆಗೊಂಡರು.
Back to top button
error: Content is protected !!